ಸಿಡಿಬಂಡಿ ಎಳೆಯುವ ಎತ್ತುಗಳಿಗೆ ಪೂಜೆ- ಪಾದ, ಕೊಂಬುಗಳಿಗೆ ಮಹಿಳೆಯರಿಂದ ಆರತಿ

260220 Siraguppa Cidibandi Utsav Ox Pooja
Published on

ಸಿರಗುಪ್ಪ: ಮಾ.3ರಂದು ಬಳ್ಳಾರಿಯಲ್ಲಿ ನಡೆಯಲಿರುವ ಅದಿದೇವತೆ ಕನಕದುರ್ಗಮ್ಮನ ಸಿಡಿಬಂಡಿ ಉತ್ಸವಕ್ಕೆ ಹೂಡುವ ಜೊತೆ ಎತ್ತುಗಳಿಗೆ ನಗರದ ಗಾಣಿಗರ ಕೆ.ಕೃಷ್ಣ ಅವರ ನಿವಾಸದಲ್ಲಿ ಬುಧವಾರ ಪೂಜೆ ಸಲ್ಲಿಸುವ ಮೂಲಕ ಉತ್ಸವದ ಸಿದ್ಧತೆಗೆ ಚಾಲನೆ ನೀಡಲಾಯಿತು. ಎತ್ತುಗಳ ಪಾದ, ಕೊಂಬುಗಳಿಗೆ ಮಹಿಳೆಯರು ಅರಿಶಿಣ, ಕುಂಕುಮ ಹಚ್ಚಿ ಆರತಿ ಬೆಳಗಿ ಪೂಜೆ ಸಲ್ಲಿಸಿದರು. ಸಿಡಿಬಂಡಿ ಉತ್ಸವಕ್ಕೆ ತಾಲೂಕು ಗಾಣಿಗರ ಸಂಘ, ಬನಶಂಕರಿ ಜಾತ್ರೆಯಲ್ಲಿ ಕಿಲಾರಿ ತಳಿಯ ಎತ್ತುಗಳನ್ನು ಖರೀದಿಸಿದೆ.

ಎತ್ತುಗಳಿಗೆ ತಿಂಗಳಿಂದ ಪೌಷ್ಟಿಕ ಆಹಾರ ನೀಡಿ ಪೋಷಣೆ ಜತೆಗೆ ಸಿಡಿಬಂಡಿ ಉತ್ಸವದಲ್ಲಿ ಜನರ ಗದ್ದಲಕ್ಕೆ ಬೆದರದಂತೆ ನಿತ್ಯ ಬಂಡಿ ಹೂಡಿ ತರಬೇತಿ ನೀಡಲಾಗುತ್ತಿದೆ. ಈ ಎತ್ತುಗಳಿಗೆ ಗಾಣಿಗರ ಸಮುದಾಯದ ಪ್ರತಿ ಮನೆಗಳಲ್ಲಿ ಪೂಜೆ ಸಲ್ಲಿಸಿ, ಮಾ.2 ರಂದು ಬಳ್ಳಾರಿಗೆ ಕಳುಹಿಸಲಾಗುತ್ತದೆ. ಸಮುದಾಯದ ಮುಖಂಡರಾದ ಕೆ.ಕೃಷ್ಣ, ಶ್ರೀರಾಮಯ್ಯ, ಸತ್ಯಪ್ಪ, ವಿನೋದ್‌ಬಾಬು, ತಿರುಪತಿ ನಾಗರಾಜು, ರೇಖಾ, ಪದ್ಮಾ, ಭಾಗ್ಯಮ್ಮ, ಲಕ್ಷ್ಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net