ಸಿಐಡಿಐ ಕೇಂದ್ರದಿಂದ ತಾಂತ್ರಿಕ ಪ್ರಯೋಜನ

14JAGGU6
ಬೆಳಗಾವಿಯ ಕೆಎಲ್‌ಎಸ್ ಜಿಐಟಿಯಲ್ಲಿ ಸ್ಥಾಪಿಸಲಾಗಿರುವ ಸಿಐಡಿಐ ಕೇಂದ್ರವನ್ನು ಡಸಾಲ್ಟ್ ಸಿಸ್ಟಂ ಸಿಇಒ ಸುದರ್ಶನ ಮೊಗಸಾಲೆ ಉದ್ಘಾಟಿಸಿದರು. ಡಾ.ಅನಂತ ಮಂಡಗಿ, ಡಾ.ಹರ್ಷಿತ್ ಕುಲಕರ್ಣಿ ಇತರರಿದ್ದರು.
Published on

ಬೆಳಗಾವಿ: ಇಲ್ಲಿನ ಕೆಎಲ್‌ಎಸ್ ಜಿಐಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ಡಸಾಲ್ಟ್ ಸಿಸ್ಟಂ ಸಂಸ್ಥೆಯ ಸಹಯೋಗದೊಂದಿಗೆ ಸ್ಥಾಪಿಸಲಾಗಿರುವ ಇಂಟರ್ ಡಿಸಿಪ್ಲಿನರಿ ಡಿಸೈನ್ ಮತ್ತು ಇನ್ನೋವೇಶನ್ (ಸಿಐಡಿಐ) ಕೇಂದ್ರವನ್ನು ಸಿಇಒ ಸುದರ್ಶನ ಮೊಗಸಾಲೆ ಉದ್ಘಾಟಿಸಿದರು.

ಸುದರ್ಶನ ಮೊಗಸಾಲೆ ಮಾತನಾಡಿ, ಸಿಐಡಿಐ ಕೇಂದ್ರದಿಂದ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣದಲ್ಲಿ ಪ್ರಯೋಜನವಾಗುತ್ತದೆ ಎಂದು ಹೇಳಿದರು. ಧಾರವಾಡದ ಟಾಟಾ ಮೋಟರ್ಸ್ ಪ್ಲಾಂಟ್ ಹೆಡ್ ಪ್ರದೋಶ ಮೊಹಂತಿ ಮಾತನಾಡಿ, ವಿದ್ಯಾರ್ಥಿಗಳು ಸಿಐಡಿಐ ಕೇಂದ್ರದ ಪ್ರಯೋಜನ ಪಡೆದು ಹೆಚ್ಚಿನ ಕೌಶಲ ಹೊಂದಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಲಾ ಸೊಸೈಟಿಯ ಅಧ್ಯಕ್ಷ ಅನಂತ ಮಂಡಗಿ, ಸಿಐಡಿಐ ಕೇಂದ್ರದ ವೈಶಿಷ್ಟೃದ ಬಗ್ಗೆ ವಿವರಿಸಿದರು. ಈ ಕೇಂದ್ರವು ಭವಿಷ್ಯದಲ್ಲಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಉತ್ತಮ ಕೌಶಲ ಬೆಳೆಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕೆಎಲ್‌ಎಸ್ ಜಿಐಟಿ ಪ್ರಾಂಶುಪಾಲ ಡಾ.ಎಂ.ಎಸ್.ಪಾಟೀಲ ಅವರು ಸಂಸ್ಥೆಯಲ್ಲಿ ಅನುಷ್ಠಾನಗೊಂಡಿರುವ ವಿವಿಧ ಶೈಕ್ಷಣಿಕ ಯೋಜನೆಗಳ ಕುರಿತು ವಿವರಿಸಿದರು.
ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಹರ್ಷಿತ ಕುಲಕರ್ಣಿ ಮಾತನಾಡಿದರು. ವಿದ್ಯಾರ್ಥಿಗಳು ಕೈಗೊಂಡ ವಿವಿಧ ಪ್ರಾಜೆಕ್ಟ್‌ಗಳ ಪ್ರಾತ್ಯಕ್ಷಿಕೆ ನೀಡಲಾಯಿತು. ಕೆಎಲ್‌ಎಸ್ ಜಿಐಟಿ ಆಡಳಿತ ಮಂಡಳಿ ಅಧ್ಯಕ್ಷ ರಾಜೇಂದ್ರ ಬೆಳಗಾಂವಕರ ಸ್ವಾಗತಿಸಿದರು. ಪ್ರೊ. ಹರೀಶ ಹುಕ್ಕೇರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net