ಚುಟುಕು ಸಾಹಿತ್ಯ ಸಮ್ಮೇಳನ

Published on

ಹುಬ್ಬಳ್ಳಿ: ಅಖಂಡ ಧಾರವಾಡ ಜಿಲ್ಲಾ ಮಟ್ಟದ 11ನೇ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಸಮ್ಮೇಳನ ಜು. 22ರಂದು ಸಂಜೆ 4ಕ್ಕೆ ಇಲ್ಲಿಯ ವಿದ್ಯಾನಗರ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದೆ.

ಜಗದ್ಗುರು ಡಾ. ಎ.ಸಿ. ವಾಲಿ ಮಹಾರಾಜರ ಸಾನ್ನಿಧ್ಯದಲ್ಲಿ ಮಾಜಿ ವಿಧಾನ ಪರಿಷತ್ ಸಭಾಪತಿ ವೀರಣ್ಣ ಮತ್ತಿಕಟ್ಟಿ ಉದ್ಘಾಟಿಸುವರು.
ಹಿರಿಯ ಚಿಂತಕ ಡಾ. ಶರಣಪ್ಪ ಕೊಟಗಿ ಸರ್ವಾಧ್ಯಕ್ಷರಾಗಿದ್ದು, ಮಾಜಿ ಸಚಿವ ಎಸ್.ಎಸ್. ಪಾಟೀಲ ಅಧ್ಯಕ್ಷತೆ ವಹಿಸುವರು.

ಹಿರಿಯ ಕವಿ ಡಾ. ಎಂ.ಎಚ್. ಹುಲ್ಲೊಳಿ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ. ಡಾ. ರಾಜೇಂದ್ರ ಗಡಾದ ಆಶಯ ಭಾಷಣ ಮಾಡುವರು. ಕಚುಸಾಪ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ, ಚನ್ನಬಸಪ್ಪ ಧಾರವಾಡಶೆಟ್ರು, ವಿ.ಜಿ. ಪಾಟೀಲ ಪಾಲ್ಗೊಳ್ಳುವರು. ಡಾ. ರಾಮು ಮೂಲಗಿ, ಗದಿಗೆಯ್ಯ ಹಿರೇಮಠ ಅಭಿನಂದನಾ ಭಾಷಣ ಮಾಡುವರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net