ಚುಟುಕು ಸಾಹಿತ್ಯಕ್ಕಿದೆ ದೀರ್ಘ ಇತಿಹಾಸ: ವಿರಾಜ್ ಅಡೂರು ಹೇಳಿಕೆ

Bdk_Chutuku literature
Published on

ಕುಂಬಳೆ: ಕಡಿಮೆ ಶಬ್ದ, ಆದರ್ಶ ಸಂದೇಶ ನೀಡುವ ವಾಮನರೂಪಿ ಚುಟುಕು ಸಾಹಿತ್ಯಕ್ಕೆ ದೀರ್ಘವಾದ ಇತಿಹಾಸ ಇದೆ. ಸರ್ವಜ್ಞ ಸಹಿತ ಶರಣರ ವಚನ, ಕಗ್ಗ, ಚುಟುಕು ಸಾಹಿತ್ಯ ರಚನೆ ಎಂದು ಸಾಹಿತಿ ವಿರಾಜ್ ಅಡೂರು ಹೇಳಿದರು.

ಕಾಸರಗೋಡಿನ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ, ಗ್ರಂಥಾಲಯದ ಬಯಲು ರಂಗಮಂದಿರದಲ್ಲಿ ಕೇರಳ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾ ಸಮಿತಿ ಪದಗ್ರಹಣ ಕಾರ್ಯಕ್ರಮದಲ್ಲಿ ನಡೆದ ಚುಟುಕು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯ ಕವಿಗಳು ಭಾಗವಹಿಸಿದ್ದರು. ಕನ್ನಡ ಭವನದ ಕಾರ್ಯದರ್ಶಿ ವಸಂತ ಕೆರೆಮನೆ ಸ್ವಾಗತಿಸಿದರು. ಕನ್ನಡ ಭವನದ ನಿರ್ದೇಶಕ ಪ್ರೊ.ಎ.ಶ್ರೀನಾಥ್ ವಂದಿಸಿದರು. ವಿಶಾಲಾಕ್ಷ ಪುತ್ರಕಳ ಕಾರ್ಯಕ್ರಮ ನಿರೂಪಿಸಿದರು. ಕವಿಗೋಷ್ಠಿಯಲ್ಲಿ ಭಾಗವಹಿಸಿದ ಕವಿಗಳಿಗೆ ಪುಸ್ತಕ ಸ್ಮರಣಿಕೆ, ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net