

ವಿಜಯವಾಣಿ ಸದ್ದಿಜಾಲ ಧಾರವಾಡ
ನಿಯಮಿತ ಸಾಲುಗಳು, ಮಿತವಾದ ಪದಗಳ ಸಾರಭರಿತವಾದ ಸಾಹಿತ್ಯದ ಪ್ರಕಾರವೇ ಚುಟುಕು ಎಂದು ಹಿರಿಯ ಸಾಹಿತಿ ಅಶೋಕ ಚೊಳಚಗುಡ್ಡ ಪ್ರತಿಪಾದಿಸಿದರು.
ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಧಾರವಾಡ ತಾಲೂಕು ಘಟಕ ಮತ್ತು ಹು-ಧಾ ನಾಗರಿಕ ಪರಿಸರ ಸಮಿತಿ ಆಶ್ರಯದಲ್ಲಿ ಇಲ್ಲಿನ ಪರಿಸರ ಭವನದಲ್ಲಿ ಆಯೋಜಿಸಿದ್ದ ಚುಟುಕು ರಚನೆ ಕಾರ್ಯಾಗಾರ ಸಮಾರಂಭದಲ್ಲಿ ಮಾತನಾಡಿದ ಅವರು, ಯುವ ಬರಹಗಾರರು ಹೆಚ್ಚು ಅಧ್ಯಯನ ಶೀಲರಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಡಾ. ಬಾಳಣ್ಣ ಶೀಗಿಹಳ್ಳಿ ಮಾತನಾಡಿ, ಬರಹಗಾರರಲ್ಲಿನ ಚಿಂತನೆ, ಮನೋಭಾವ, ಸೃಜನಶೀಲತೆ ಅರಿವಿನಿಂದಲೇ ಕಾವ್ಯ ಪರಿಪಕ್ವವಾಗಲು ಸಾಧ್ಯ ಎಂದರು.
ಚನ್ನಬಸಪ್ಪ ಧಾರವಾಡಶೆಟ್ಟರ, ಪದ್ಮಜಾ ಉಮರ್ಜಿ ತಾಲೂಕಿನ ನೂತನ ಪದಾಧಿಕಾರಿಗಳಿಗೆ ಅಧಿಕಾರದ ಪ್ರಮಾಣಪತ್ರ ವಿತರಿಸಿದರು. ಚುಟುಕು ಸ್ಪರ್ಧೆಯಲ್ಲಿ ಮಂಜುಳಾ ಎಚ್. (ಪ್ರಥಮ), ಜಯಶ್ರೀ ಬೆಂಡಿಗೇರಿ (ದ್ವೀತಿಯ), ಆಶಾ ಮುನವಳ್ಳಿ (ತೃತೀಯ), ಎಸ್.ಎಂ. ಬಳ್ಳಾರಿ, ಸವಿತಾ ನಿಲೆಗಣಿ ಸಮಾಧಾನಕರ ಪ್ರಶಸ್ತಿ ಪಡೆದರು.
ಪ್ರಮೀಳಾ ಜಕ್ಕಣ್ಣವರ, ಡಾ. ಸುಧಾ ಹುಲಗೂರ, ಶ್ರೀನಿವಾಸ ಪಾಟೀಲ, ಪಂಪಾಪತಿ ಹಿರೇಮಠ, ಗೀತಾ ಕುಂಬಿ, ಪ್ರಮೋದ ಜೋಶಿ, ಮೃತ್ಯುಂಜಯ ಮಟ್ಟಿ, ವಂದನಾ ಕರಾಳೆ, ಉಮಾ ಪುರಾಣಿಕ, ಇತರರು ಇದ್ದರು.
ಜಯಶ್ರೀ ಪಾಟೀಲ ಸ್ವಾಗತಿಸಿದರು. ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಉಷಾ ಗದ್ದಗಿಮಠ ನಿರೂಪಿಸಿದರು.