ಚುಸಾಪ ಜಿಲ್ಲಾ ಸಮ್ಮೇಳನ 12ರಂದು,  ಸರ್ವಾಧ್ಯಕ್ಷರಿಗೆ ಆಹ್ವಾನ

IMG-20250109-WA0042-1.jpg
Published on

ಹುಬ್ಬಳ್ಳಿ: ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಧಾರವಾಡ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಮಟ್ಟದ 5ನೇ ಸಮ್ಮೇಳನವನ್ನು ಜ. 12ರಂದು ಇಲ್ಲಿಯ ವಿದ್ಯಾನಗರ ಕನಕದಾಸ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸತ್ತೂರಿನ ಶ್ರೀ ಬಸವೇಶ್ವರ ರೂರಲ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ. ಶರಣಪ್ಪ ಕೊಟಗಿ ಆಯ್ಕೆಯಾಗಿದ್ದು, ಚುಸಾಪ ಮಹಾನಗರ ಜಿಲ್ಲಾ ಘಟಕದ ವತಿಯಿಂದ ಅವರಿಗೆ ಆಮಂತ್ರಣ ಪತ್ರಿಕೆ ನೀಡಲಾಯಿತು.

ಪರಿಷತ್ತಿನ ರಾಜ್ಯ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ, ಶ್ರೇಯಾ ಜನ ಸೇವಾ ಫೌಂಡೇಷನ್ ಅಧ್ಯಕ್ಷ ವಿ.ಜಿ. ಪಾಟೀಲ, ಡಾ. ರಾಮು ಮೂಲಗಿ, ರಂಗನಟ ಶಿವಾನಂದ ಬೆಂಗೇರಿ ಉಪಸ್ಥಿತರಿದ್ದರು.

ಕೊಟಗಿ ಅವರು ಕವಿಯಾಗಿದ್ದು, ಪ್ರಕಟಣೆ, ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ವಿವಿಧ ಸಂಘ -ಸಂಸ್ಥೆಗಳ ಪದಾಧಿಕಾರಿಗಳಾಗಿರುವ ಅವರು ಬಹುಮುಖ ಪ್ರತಿಭಾನ್ವಿತರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net