ಕಚುಸಾಪ ಜಿಲ್ಲಾ ಸಮ್ಮೇಳನ ಸರ್ವಾಧ್ಯಕ್ಷರಾಗಿ ಡಾ. ಮೂಲಗಿ ಆಯ್ಕೆ

IMG_20241222_210827_778.jpg
Published on

ಹುಬ್ಬಳ್ಳಿ: ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಧಾರವಾಡ ಜಿಲ್ಲಾ ಹನ್ನೆರಡನೆಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಜಾನಪದ ತಜ್ಞ, ಹಿರಿಯ ಕವಿ ಡಾ. ರಾಮು ಮೂಲಗಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಚಾಲಕರ ಕೃಷ್ಣಮೂತಿರ್ ಕುಲಕರ್ಣಿ ತಿಳಿಸಿದ್ದಾರೆ.

ಭೈರಿದೇವರಕೊಪ್ಪ ಜನಪದ ಅಂಗಳ ಸಭಾಂಗಣದಲ್ಲಿ ಜನವರಿ 12ರಂದು ಸಮ್ಮೇಳನ ಜರುಗಲಿದ್ದು, ವಿಚಾರ ಗೋಷ್ಠಿ, ಚುಟುಕು ವಾಚನ ಗೋಷ್ಠಿಗಳಿದ್ದು ಆಸಕ್ತರು, ಡಿ. 25ರೊಳಗೆ ಹೆಸರು ನೊಂದಾಯಿಸಬಹುದು.

ಕಚುಸಾಪ ಸದಸ್ಯತ್ವ ಪಡೆದವರು ಗೋಷ್ಠಿಯಲ್ಲಿ ಭಾಗವಹಿಸಬಹುದು ಎಂದು ಪ್ರಸಾರಾಂಗ ನಿರ್ದೇಶಕ ಚನ್ನಬಸಪ್ಪ ಧಾರವಾಡಶೆಟ್ರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net