ಹುಬ್ಬಳ್ಳಿ: ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ವತಿಯಿಂದ 12ನೇ ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನವು ಮೇ 26ರಂದು ಬೆಳಗ್ಗೆ 9ಕ್ಕೆ ಶಿರಸಿಯ ನೆಮ್ಮದಿ ಆವರಣ ರಂಗಧಾಮದ ದಿನಕರ ದೇಸಾಯಿ ವೇದಿಕೆಯಲ್ಲಿ ಏರ್ಪಡಿಸಲಾಗಿದೆ.
ಸಂಸ್ಥಾನ ಗವಿಮಠ, ಬಸವಕಲ್ಯಾಣದ ಡಾ. ಘನಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಸರ್ವಾಧ್ಯಕ್ಷತೆಯಲ್ಲಿ ಸಮ್ಮೇಳನ ಜರುಗಲಿದ್ದು, ಶ್ರೀ ರುದ್ರದೇವರ ಮಠ ಶಿರಸಿಯ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.
ಹಿರಿಯ ಚಿಂತಕರು, ಕೃಷಿ ಸಾಧಕ ಹುಲೇಕಲ್ ಶ್ರೀ ರಾಮದಾಸ ರಾಮಪೈ ಸಮ್ಮೇಳನ ಉದ್ಘಾಟಿಸುವರು.
ನೃತ್ಯ ವೈಭವ, ವೈಚಾರಿಕ ಚಿಂತನಗೋಷ್ಠಿ, ತಾಳಮದ್ದಳೆ, ಚುಟುಕು ಸಂಭ್ರಮ ಕವಿಗೋಷ್ಠಿ, ಸನ್ಮಾನ ಮುಂತಾದ ಸಾಹಿತ್ಯಿಕ ಹಾಗೂ ಸಾಂಸತಿಕ ಕಾರ್ಯಕ್ರಮಗಳು ನಡೆಯಲಿವೆ.
ಸಾಹಿತ್ಯಾಸಕ್ತರು ಭಾಗವಹಿಸಬೇಕೆಂದು ಕಚುಸಾಪ ಶಿರಸಿ ಶೈಕ್ಷಣಿಕ ಜಿಲ್ಲಾಧ್ಯಕ್ಷ ಮನೋಹರ ಮಲ್ಮನೆ, ಕಚುಸಾಪ ಕೇಂದ್ರ ಸಮಿತಿ ಸಂಚಾಲಕ ಕೃಷ್ಣಮೂತಿರ್ ಕುಲಕಣಿರ್, ಸಾಹಿತ್ಯ ಸಂಚಲನದ ಅಧ್ಯಕ್ಷ ಕೃಷ್ಣ ಪದಕಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.