ಚುಸಾಪಕ್ಕೆ ಡಾ. ಶಾಂತಣ್ಣ ಕಡಿವಾಲ ಪುನರಾಯ್ಕೆ

img_1748777550888-1.jpg
Published on

ಹುಬ್ಬಳ್ಳಿ: ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಧಾರವಾಡ ಜಿಲ್ಲಾಧ್ಯಕ್ಷರಾಗಿ ಡಾ. ಶಾಂತಣ್ಣ ಕಡಿವಾಲ, ಪ್ರಧಾನ ಕಾರ್ಯದರ್ಶಿಯಾಗಿ ವಿ.ಜಿ. ಪಾಟೀಲ ಅವರು ಪುನರಾಯ್ಕೆಯಾಗಿದ್ದಾರೆ ಎಂದು ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ತಿಳಿಸಿದ್ದಾರೆ.

ಕಾರ್ಯಾಧ್ಯಕ್ಷರಾಗಿ ಡಾ. ಶರಣಪ್ಪ ಕೊಟಗಿ, ಉಪಾಧ್ಯಕ್ಷರಾಗಿ ಪದ್ಮಜಾ ಉಮರ್ಜಿ ಮತ್ತು ಡಾ. ರಾಮೂ ಮೂಲಗಿ, ಕೋಶಾಧ್ಯಕ್ಷ- ಎಸ್.ಐ. ನೇಕಾರ ಮತ್ತು ಕಾರ್ಯದರ್ಶಿ ಸಿದ್ದಲಿಂಗೇಶ ನೀಲಗುಂದ ಅವರನ್ನು ನೇಮಕ ಮಾಡಲಾಗಿದೆ.

ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಡಾ. ಎಚ್.ವಿ. ಬೆಳಗಲಿ, ಡಾ. ಸಂದೀಪ ಬೂದಿಹಾಳ, ಗದಿಗೆಯ್ಯ ವಿ. ಹಿರೇಮಠ, ಡಾ. ಎಂ.ಎಚ್. ಹುಲ್ಲೋಳಿ, ಕೆ.ಎಚ್. ನಾಯಕ, ಶ್ರೀನಿವಾಸ ಪಾಟೀಲ, ನಿಂಗಣ್ಣ ಕುಂಟಿ, ಗಂಗಾಧರ ದೊಡ್ಡವಾಡ, ಸುನಂದಾ ಶ್ಯಾಗೋಟಿ, ವೀಣಾ ಬರಗಿ ಮತ್ತು ಸಂಧ್ಯಾ ದೀಕ್ಷಿತ್ ನೇಮಕಗೊಂಡಿದ್ದಾರೆ ಎಂದು ಪ್ರಸಾರಾಂಗ ನಿರ್ದೇಶಕ ಚನ್ನಬಸಪ್ಪ ಧಾರವಾಡಶೆಟ್ರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net