ಚೂಡಿ ಧರಿಸಿದ ಲೇಡಿ ಮಾಡಿದ ಕೆಲಸವೇನು ಗೊತ್ತಾ..?

house-robbery-churidar-thief.
Published on

ಸಿದ್ದಾಪುರ: ಮನೆಯವರೆಲ್ಲ ಗದ್ದೆನಾಟಿಗೆ ಹೋದ ಸಂದರ್ಭದಲ್ಲಿ ಮಹಿಳೆಯೊಬ್ಬಳು ಮನೆಯೊಳಗೆ ನುಗ್ಗಿ, 1.23 ಲಕ್ಷ ರೂ. ಮೌಲ್ಯದ ಬೆಳ್ಳಿ, ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿದ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.
ಬೇಡ್ಕಣಿ ಪುಟ್ಟೇನಕ್ಲು ಗ್ರಾಮದ ಮಹೇಶ ತಿಮ್ಮ ನಾಯ್ಕ ಅವರ ಮನೆಯಲ್ಲಿ ಕಳ್ಳತನವಾಗಿದೆ. ಗದ್ದೆ ನಾಟಿ ಕಾರ್ಯ ಮುಗಿಸಿ ಮಧ್ಯಾಹ್ನ ವಾಪಸ್ ಮರಳುವಾಗ ಚುಡಿದಾರ ಧರಿಸಿದ 28 ರಿಂದ 29 ವಯಸ್ಸಿನ ಮಹಿಳೆಯೊಬ್ಬಳು ಮನೆಯಿಂದ ಹೊರ ಬಿದ್ದಿದ್ದನ್ನು ಕಂಡಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಬೆನ್ನಟ್ಟಿದರೂ ಆಕೆ ಮನೆಯ ಹಿಂದಿನಿಂದ ಓಡಿ ನಾಪತ್ತೆಯಾಗಿದ್ದಳು. ಮನೆಯ ಕಿಟಕಿಯಲ್ಲಿ ಇಟ್ಟ ಚಾವಿಯ ಮೂಲಕ ಚಾವಿ ತೆಗೆದು ಬಿರುವಿನಲ್ಲಿ ಇಟ್ಟಿದ್ದ ಬಂಗಾರದ ಆಭರಣಗಳನ್ನು ಕದ್ದೊಯ್ದಿದ್ದಾಳೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net