ಕ್ರಿಸ್‌ಮಸ್ ಆಚರಣೆ 24ರ ಮಧ್ಯರಾತ್ರಿಯಿಂದ ಪ್ರಾರಂಭ

IMG20241224141329.jpg
Published on

ಬೆಳಗಾವಿ: ಸಂತೋಷ, ಪ್ರೀತಿ, ಶಾಂತಿ ಮತ್ತು ಆಧ್ಯಾತ್ಮಿಕ ನವೀಕರಣದ ಋತುವಾದ ಯೇಸುಕ್ರಿಸ್ತನ ಜನ್ಮದಿನವಾದ ಕ್ರಿಸ್‌ಮಸ್ ಆಚರಣೆ ಡಿ.24ರ ಮಧ್ಯರಾತ್ರಿಯಿಂದ ಆರಂಭಗೊಳ್ಳಲಿದೆ ಎಂದು ಕ್ರೈಸ್ತ ಧರ್ಮಗುರು ಡೇರಿಕ್ ಫರ್ನಾಂಡಿಸ್ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ರಿಸ್‌ಮಸ್ ಅನ್ನು ಆಚರಿಸಲು ಜಗತ್ತು ಉತ್ಸಾಹದಿಂದ ತವಕಿಸುತ್ತಿದೆ. ಡಿ.25ರಂದು ಆಚರಿಸಲಾಗುವ ಕ್ರಿಸ್‌ಮಸ್ ಸಂರಕ್ಷಕನಾದ ಯೇಸು ಕ್ರಿಸ್ತನ ಜನನವನ್ನು ಸೂಚಿಸುತ್ತದೆ. ಡಿ.24ರ ಮಧ್ಯರಾತ್ರಿ ಎಲ್ಲ ಚರ್ಚ್‌ಗಳಲ್ಲಿ ಪ್ರಾರ್ಥನೆ ಆಯೋಜಿಸಲಾಗಿದೆ. ಕ್ರಿಸ್‌ಮಸ್ ಕ್ಯಾರೋಲ್‌ಗಳ ಗಾಯನ ನಡೆಯಲಿದೆ. ಬಡವರ ಬಗ್ಗೆ ಕಾಳಜಿ ವಹಿಸಲು ಮತ್ತು ಯಾರೂ ಹಸಿವಿನಿಂದ ಬಳಲದಂತೆ ನೋಡಿಕೊಳ್ಳಲು ಜನರನ್ನು ಪ್ರೇರೇಪಿಸಲಾಗುತ್ತದೆ. ವಿವಿಧೆಡೆ ಹಾಡುಗಾರಿಕೆ, ಕ್ರಿಸ್ಮಸ್ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಜನರ ನಡುವೆ ಪ್ರೀತಿ, ಭ್ರಾತೃತ್ವ ಮೂಡಿಸುವ ಸಲುವಾಗಿ ಕುಟುಂಬ ಸಭೆಗಳು ನಡೆಯುತ್ತವೆ. ಡಿ.29ರಂದು ಬೆಳಗಾವಿಯ ಫಾತಿಮಾ ಕ್ಯಾಥೆಡ್ರಲ್‌ನಲ್ಲಿ 2025ರ ಜುಬಿಲಿ ವರ್ಷದ ಮಹಾ ಉದ್ಘಾಟನೆ ನಡೆಯಲಿದೆ. ಅಲ್ಲಿ ಕರ್ನಾಟಕದ 5 ಜಿಲ್ಲೆಗಳಾದ ಬೆಳಗಾವಿ. ಧಾರವಾಡ, ಹಾವೇರಿ, ಗದಗ, ಬಾಗಲಕೋಟೆ ಮತ್ತು ಕೊಲ್ಲಾಪುರ ಜಿಲ್ಲೆಯ ಚಂದಗಡ ತಾಲೂಕಿನ ಜನರು ಆಗಮಿಸುವರು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net