ಹಿರೀಸಾವೆಯಲ್ಲಿ ಕ್ರಿಸ್‌ಮಸ್ ಆಚರಣೆ

25 HRS 01
ಹಿರೀಸಾವೆ ಹೋಬಳಿ ದಿಡಗ ಗ್ರಾಮದಲ್ಲಿ ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ನಿರ್ಮಿಸಿರುವ ಗೋದಲಿಯನ್ನು ವೀಕ್ಷಿಸುತ್ತಿರುವ ಮಕ್ಕಳು.
Published on

ಹಿರೀಸಾವೆ: ಹೋಬಳಿಯ ದಿಡಗ ಗ್ರಾಮದಲ್ಲಿ ಕ್ರೈಸ್ತರು ಕ್ರಿಸ್‌ಮಸ್ ಹಬ್ಬವನ್ನು ಬುಧವಾರ ಸಂಭ್ರಮ ಸಡಗರದಿಂದ ಆಚರಿಸಿದರು

.

ಹಬ್ಬದ ಹಿನ್ನೆಲೆಯಲ್ಲಿ ಕಳೆದ 5-6 ದಿನಗಳಿಂದಲೇ ಪೂರ್ವ ಸಿದ್ಧತೆ ನಡೆಸಿಕೊಂಡಿದ್ದು ಬೆಟ್ಟ, ಊರು, ಸೇತುವೆ, ಬೆಟ್ಟದ ಮೇಲಿಂದ ಝರಿ ಹರಿಯುವುದು, ಚರ್ಚ್, ಕೊಟ್ಟಿಗೆಯಲ್ಲಿ ಯೇಸು ಜನಿಸಿರುವ ಬಗ್ಗೆ ಕತೆ ಹೇಳುವ ದೃಶ್ಯ, ಏಂಜಲ್, ಯೇಸುವಿನ ಮಾತೆ ಹಾಗೂ ಅನುಯಾಯಿಗಳು ಪೂಜಿಸುತ್ತಿರುವ ಮಾದರಿಯ ಗೋದಲಿ ನಿರ್ಮಿಸಿ ವಿದ್ಯುತ್ ಅಲಂಕಾರ ಮಾಡಿರುವುದು ಆಕರ್ಷಣೀಯವಾಗಿತ್ತು. ಮುಂಜಾನೆಯಿಂದಲೇ ಮನೆಗಳಲ್ಲಿ ಹಬ್ಬದ ಸಡಗರ ಕಂಡು ಬಂದಿತು. ಸ್ನೇಹಿತರು ಹಾಗೂ ಸಂಬಂಧಿಕರು ಶುಭಾಶಯ ವಿನಿಮಯ ಮಾಡಿಕೊಂಡು ಸಿಹಿ ಹಂಚಿ ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net