ರತ್ನಮಾನಸ ನಿಲಯದಲ್ಲಿ ಕ್ರಿಸ್‌ಮಸ್

New Project (20)
Published on

ಬೆಳ್ತಂಗಡಿ: ಉಜಿರೆ ರತ್ನಮಾನಸ ವಸತಿ ನಿಲಯದಲ್ಲಿ ಕ್ರಿಸ್ಮಸ್ ಆಚರಿಸಲಾಯಿತು. ರತ್ನಮಾನಸ ವಸತಿ ನಿಲಯದ ಹಳೇ ವಿದ್ಯಾರ್ಥಿ, ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಜೋಸೆಫ್ ಎನ್.ಎಂ. ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಧನ್ಯಕುಮಾರ್ ಮಾತನಾಡಿದರು. ರತ್ನಮಾನಸ ವಸತಿ ನಿಲಯದ ಪಾಲಕ ಯತೀಶ್ ಕೆ.ಬಳಂಜ ಅಧ್ಯಕ್ಷತೆ ವಹಿಸಿದ್ದರು. ಡಾ.ಜೋಸೆಫ್ ಎನ್.ಎಂ. ಅವರನ್ನು ಸನ್ಮಾನಿಸಲಾಯಿತು.

ರತ್ನಮಾನಸದ ಸಿಬ್ಬಂದಿ ಉದಯರಾಜ್, ದೀಪಕ್ ಕೆ. ಉಪಸ್ಥಿತರಿದ್ದರು. ವಿದ್ಯಾರ್ಥಿ ಸಮ್ಯಕ್ ಅತಿಥಿ ಪರಿಚಯ ಮಾಡಿದರು. ಪ್ರೀತಮ್ ಸಿ.ಜೆ. ಸ್ವಾಗತಿಸಿದರು. ಅಪ್ಪು ವಂದಿಸಿದರು. ನಿಶೀತ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net