

ಮುಂಡರಗಿ: ಸ್ಥಳೀಯ ಅನ್ನದಾನೀಶ್ವರ ನಗರದಲ್ಲಿರುವ ನಿರ್ಮಲ ಮಂದಿರದಲ್ಲಿ ಬುಧವಾರ ಸಂಭ್ರಮದಿಂದ ಕ್ರಿಸ್‌ಮಸ್ ಹಬ್ಬ ಆಚರಿಸಲಾಯಿತು.
ನಿರ್ಮಲ ನಿಕೇತನ ಕಾನ್ವೆಂಟ್ ಆವರಣದಲ್ಲಿ ಒಣಹುಲ್ಲು, ಬಿದಿರು, ಕಟ್ಟಿಗೆ ಮೊದಲಾದವುಗಳಿಂದ ಕೃತಕ ಕುರಿದೊಡ್ಡಿ ಹಾಗೂ ಬಾಲ ಏಸುವಿನ ಪ್ರತಿಕೃತಿಯನ್ನು ನಿರ್ಮಿಸಲಾಗಿತ್ತು. ಅಲ್ಲಿ ಬಾಲಏಸು, ತಾಯಿ ಮೇರಿ ಮೊದಲಾದವರ ಆಕರ್ಷಕ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ವಿಶೇಷ ಅಲಂಕಾರ ಮಾಡಲಾಗಿತ್ತು.