

ಮೂಲ್ಕಿ: ಕ್ರಿಸ್‌ಮಸ್ ಎಂದರೆ ಶಾಂತಿ, ಪ್ರೀತಿ, ಭ್ರಾತೃತ್ವದ ಹಬ್ಬ. ಶಾಲೆಯಲ್ಲಿ ಎಲ್ಲ ಧರ್ಮದ ಹಬ್ಬ ಆಚರಿಸುವ ಮೂಲಕ ಮಕ್ಕಳಲ್ಲಿ ಸಮಾನತೆ ಮೂಡಲು ಸಹಕಾರಿ. ಇದು ಇಂದಿನ ಅನಿವಾರ್ಯವಾಗಿದೆ. ಕ್ರಿಸ್‌ಮಸ್ ಹಬ್ಬ ಎಲ್ಲರಿಗೂ ಶುಭವನ್ನು ತರಲಿ ಎಂದು ದುಬೈಯ ಚೈನಾ ಪೆಟ್ರೋಲಿಯಂ ಇಂಜಿನಿಯರಿಂಗ್ ಕಾರ್ಪೊರೇಷನ್ ಉದ್ಯೋಗಿ ನೀಲ್ ಮಾಬೆನ್ ಹೇಳಿದರು.
ಕಾರ್ನಾಡ್ ಸಿಎಸ್‌ಐ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯಲ್ಲಿ ಕ್ರಿಸ್‌ಮಸ್ ಸಂಭ್ರಮ ಉದ್ಘಾಟಿಸಿ ಮಾತನಾಡಿದರು. ಸಭಾಪಾಲನಾ ಸಮಿತಿ ಅಧ್ಯಕ್ಷ ಸ್ಟೀವನ್ ಸರ್ವೋತ್ತಮ ಅಧ್ಯಕ್ಷತೆ ವಹಿಸಿದ್ದರು. ದುಬೈಯ ಎನ್‌ಎಂಸಿ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯೆ ಡಾ.ವಿನಿತಾ ಮಾಬೆನ್ ಮತ್ತು ಶೀಲಾ ಕರ್ಕಡ, ವಿಜಯ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಸ್ಯಾಮ್ ಮಾಬೆನ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹರ್ಷರಾಜ್ ಶೆಟ್ಟಿ ಜಿ.ಎಂ., ಸಂಚಾಲಕ ರಂಜನ್ ಜತ್ತನ್ನ ಉಪಸ್ಥಿತರಿದ್ದರು.
ಮುಖ್ಯಶಿಕ್ಷಕಿ ಜೀಟಾ ಮೆಂಡೋನ್ಸ ಸ್ವಾಗತಿಸಿದರು. ವಿದ್ಯಾರ್ಥಿನಿ ರೋಶ್ನಿ ಹಬ್ಬದ ಮಹತ್ವ ತಿಳಿಸಿದರು. ರಿಶಾನ್ ರೋಡ್ರಿಗಸ್ ಮತ್ತು ಶಿಕ್ಷಕಿ ಆಶಾ ರೋಸ್ಲಿನ್ ನಿರೂಪಿಸಿದರು. ಸೀಮಾ ವಂದಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.