

ಬಂಟ್ವಾಳ: ಲೊರೆಟ್ಟೊ ಪದವಿನಲ್ಲಿರುವ ಲೊರೆಟ್ಟೊ ಮಾತಾ ಚರ್ಚ್‌ನಲ್ಲಿ ಕ್ರಿಸ್‌ಮಸ್ ಹಬ್ಬ ಆಚರಿಸಲಾಯಿತು.
ಸಾಯಂಕಾಲದ ಬಲಿಪೂಜೆಯಲ್ಲಿ ನೂರಾರು ಭಕ್ತರು ಭಾಗವಹಿಸಿದ್ದರು. ಪ್ರಧಾನ ಧರ್ಮಗುರು ಫ್ರಾನ್ಸಿಸ್ ಕ್ರಾಸ್ತಾ, ಲೊರೆಟ್ಟೊ ಆಂಗ್ಲ ಮಾಧ್ಯಮ ಶಾಲಾ ಮುಖ್ಯಶಿಕ್ಷಕ ಜೇಸನ್ ಮೋನಿಸ್ ಭಾಗವಹಿಸಿ ಕ್ರಿಸ್‌ಮಸ್ ಸಂದೇಶ ನೀಡಿದರು.
ಹಬ್ಬದ ಸಂಭ್ರಮಕ್ಕೆ ಸಹಕರಿಸಿದ ದಾನಿಗಳಿಗೆ ಅಲಂಕರಿಸಿದ ಮೇಣದ ಬತ್ತಿಗಳನ್ನು ವಿತರಿಸಲಾಯಿತು. ಚರ್ಚನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು. ಬಲಿ ಪೂಜೆಯ ಬಳಿಕ ಐಸಿವೈಎಂ ಸದಸ್ಯರು ಮನರಂಜನಾ ಕಾರ್ಯಕ್ರಮ ನೀಡಿದರು. ಏಸುಕ್ರಿಸ್ತರ ಜನ್ಮ ದಿನವನ್ನು ಸಾರುವ ಗೋದಲಿ ಆಕರ್ಷಣೀಯವಾಗಿತ್ತು. ಚರ್ಚ್ ಪಾಲನಾ ಮಂಡಳಿ ನೇತೃತ್ವ ವಹಿಸಿತ್ತು.