

ವಿಜಯವಾಣಿ ಸುದ್ದಿಜಾಲ ಧಾರವಾಡ
ಕ್ರೈಸ್ತ ಸಮುದಾಯದವರು ನಗರದಲ್ಲಿ ಬುಧವಾರ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.
ಬೆಳಗ್ಗೆಯೇ ಕುಟುಂಬ ಸಮೇತರಾಗಿ ಚರ್ಚಗೆ ತೆರಳಿ ಶ್ರದ್ಧಾ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು. ಯೇಸುವಿನ ಕುರಿತು ಗೀತೆಗಳನ್ನು ಹಾಡಿದರು. ಧರ್ಮ ಗುರುಗಳ ಹಬ್ಬದ ಸಂದೇಶವನ್ನು ಆಲಿಸಿ ಶುಭಾಶಯ ವಿನಿಮಯ ಮಾಡಿಕೊಂಡರು.
ನಗರದ ಸೇಂಟ್ ಜೋಸೆಫ್ ಚರ್ಚ್, ಹೆಬಿಕ್ ಮೆಮೋರಿಯಲ್ ಚರ್ಚ, ಹೋಲಿ ಕ್ರಾಸ್ ಚರ್ಚ್, ನಿರ್ಮಲ ನಗರ, ಕಲ್ಯಾಣ ನಗರದ ಚರ್ಚ್ಗಳು ಸೇರಿ ಎಲ್ಲ ಚರ್ಚ್ಗಳಲ್ಲಿ ವಿಶೇಷ ದೀಪಾಲಂಕಾರ ಮಾಡಲಾಗಿತ್ತು. ಹೆಬಿಕ್ ಸ್ಮಾರಕ ದೇವಾಲಯದಲ್ಲಿ ಬಾಲ ಯೇಸುವಿನ ಜನ್ಮ ವೃತ್ತಾಂತ ಸಾರುವ ಗೋದಲಿ ಎಲ್ಲರ ಗಮನ ಸೆಳೆಯಿತು.
ಹೆಬಿಕ್ ಮೆಮೋರಿಯಲ್ ಚರ್ಚ್ನಲ್ಲಿ ಬಿಷೋಪ್ ರೈ.ರೆ. ಮಾರ್ಟಿನ್ ಬೋರ್ಗಾಯಿ ಅವರು ಕ್ರಿಸ್ಮಸ್ ಸಂದೇಶ ಸಾರುವ ಮೂಲಕ ಯೇಸು ಎಲ್ಲರೂ ಒಳ್ಳೆಯದನ್ನು ಮಾಡಲಿ ಎಂದು ಹಾರೈಸಿದರು.