

ಬೆಳಗಾವಿ: ಕ್ರೈಸ್ತ ಸಮುದಾಯದವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡುವ ಕುರಿತು ಚರ್ಚಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಹಂತದಲ್ಲೂ ಕ್ರೈಸ್ತ ಸಮುದಾಯಕ್ಕೆ ರಾಜಕೀಯ ಸ್ಥಾನಮಾನ ಕೊಡಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನಗರದ ಮೆಥೋಡಿಸ್ಟ್ ಚರ್ಚ್ ಆವರಣದ ಡಾ.ಜೆ.ಟಿ.ಸೀಮಂಡ್ಸ್ಹಾ ಲ್‌ನಲ್ಲಿ ಜಿಲ್ಲಾ ಕ್ರೈಸ್ತ ಸಮುದಾಯದಿಂದ ಭಾನುವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು. ಜಿಲ್ಲೆಯ ಎಲ್ಲ ಶಾಸಕರು ಕ್ರೈಸ್ತ ಸಮುದಾಯದ ಬೆಳವಣಿಗೆಗೆ ಶ್ರಮಿಸುತ್ತೇವೆ ಎಂದರು.
ಶಾಸಕ ಆಸೀಫ್ ಸೇಠ್ ಮಾತನಾಡಿ, ನಾನು ಶಾಸಕನಾಗಿ ಆಯ್ಕೆಯಾಗಲು ಕ್ರೈಸ್ತ ಸಮುದಾಯದವರ ಬೆಂಬಲವೂ ಕಾರಣವಾಗಿದೆ. ಸಮುದಾಯದ ಅಭಿವೃದ್ಧಿಗೆ ಕೈಜೋಡಿಸುವೆ.
ಸಮಾಜದ ಸಮಗ್ರ ಬೆಳವಣಿಗೆಗೆ ದುಡಿಯುತ್ತಿರುವ ಸತೀಶ ಜಾರಕಿಹೊಳಿ ಮುಂದೊಂದು ದಿನ ಮುಖ್ಯಮಂತ್ರಿ ಆಗುವುದು ಖಚಿತ ಎಂದರು. ಶಾಸಕ ವಿಶ್ವಾಸ ವೈದ್ಯ, ರಾಹುಲ ಜಾರಕಿಹೊಳಿ, ಕಾಂಗ್ರೆಸ್ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಮೃಣಾಲ್ ಹೆಬ್ಬಾಳ್ಕರ್, ರೆವರೆಂಡ್ ಶಾಂತಪ್ಪ ಅಂಕಲಗಿ, ರೆವರೆಂಡ್ಜಾ ನ್ ಹಂಚಿನಮನಿ, ಫಾದರ್ ಪ್ರಮೋದ, ದಿನಕರ ಚಿಲ್ಲಾಳ, ರೆವರೆಂಡ್ ಥಾಮಸ್, ಡೇವಿಡ್ ಸೀಮಿಯೊನ್, ಪ್ರಭಾಕರ ಹುಲಿಕವಿ, ಶಾಂತ ಮೂಡಲಗಿ ಇತರರಿದ್ದರು.