

ಮಂಡ್ಯ: ಕ್ರೈಸ್ತ ಅಭಿವೃದ್ಧಿ ನಿಮಗಕ್ಕೆ ಅಧ್ಯಕ್ಷ ಮತ್ತು ನಿರ್ದೇಶಕರನ್ನಾಗಿ ರಾಜ್ಯದ ಮೂಲ ನಿವಾಸಿಗಳಾದ ಕ್ರೈಸ್ತ ಕನ್ನಡಿಗರನ್ನ ನೇಮಕ ಮಾಡಬೇಕೆಂದು ಒತ್ತಾಯಿಸಿ ಕದಂಬಸೈನ್ಯದಿಂದ ಶುಕ್ರವಾರ ಡಿಸಿ ಡಾ.ಕುಮಾರಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಸಂಘಟನೆ ಕಾರ್ಯಕರ್ತರು, ಧರ್ಮಕ್ಕಿಂತ ಭಾಷೆ ಪ್ರಧಾನವಾಗಿದೆ. ನಮ್ಮ ಮೂಲನಿವಾಸಿಗಳಾದ ಕ್ರೈಸ್ತ ಕನ್ನಡಿಗರನ್ನು ನೇಮಕ ಮಾಡಿ ರಾಜಕೀಯದಲ್ಲಿ ಇದುವರೆಗೂ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್, ರಾಜ್ಯ ಸಹಕಾರ್ಯದರ್ಶಿ ಉಮ್ಮಡಹಳ್ಳಿ ನಾಗೇಶ್, ಬಿ.ಶಿವಕುಮಾರ್, ಆರಾಧ್ಯ ಗುಡೇಗನಹಳ್ಳಿ ಇತರರಿದ್ದರು.