

ಕಾರ್ಕಳ: ಉಡುಪಿ ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಕಾವಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗಗಳ ಉಡುಪಿ ಜಿಲ್ಲಾಮಟ್ಟದ ಬಾಲಕಿಯರ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ಕಾರ್ಕಳದ ಕ್ರೈಸ್ಟ್‌ಕಿಂಗ್ ಆಂಗ್ಲ ಮಾಧ್ಯಮ ಪೌಢಶಾಲೆ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಮೈಸೂರು ವಿಭಾಗಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿದೆ. 9ನೇ ತರಗತಿಯ ಶಗುನ್ ವರ್ಮ, ಶೈನಿ ಡಿಸೋಜ, ಕಾರ್ತಿಕಾ ಶೆಟ್ಟಿ, ಆಶಿಕಾ, 10ನೇ ತರಗತಿಯ ವಿದ್ಯಾಶ್ರೀ, ಕೀರ್ತನಾ ಡಿಸೋಜ, 8ನೇ ತರಗತಿ ಸಾನ್ವಿ ಶೆಟ್ಟಿ ತಂಡವನ್ನು ಪ್ರತಿನಿಧಿಸಿದ್ದರು. ಈ ಪೈಕಿ ಶೈನಿ ಡಿಸೋಜ, ಶಗುನ್ ವರ್ವ, ಕಾರ್ತಿಕಾ ಶೆಟ್ಟಿ ಮೈಸೂರು ವಿಭಾಗಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪಂದ್ಯಾಟದಲ್ಲಿ ಶಗುನ್ ವರ್ಮಾ ಬೆಸ್ಟ್ ಅಟ್ಯಾಕರ್, ಶೈನಿ ಡಿಸೋಜ ಬೆಸ್ಟ್ ಪಾಸರ್ ಪ್ರಶಸ್ತಿ ಪಡೆದುಕೊಂಡರು. ಜತೆಗೆ ಪ್ರಾಥಮಿಕ ವಿಭಾಗದ ಬಾಲಕಿಯರ ಕಾರ್ಕಳ ತಾಲೂಕು ತಂಡ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ತಂಡ ಪ್ರತಿನಿಧಿಸಿದ್ದ ಸಂಸ್ಥೆ ವಿದ್ಯಾರ್ಥಿನಿಯರಾದ ತ್ರಿಷ್ಮಾ ಎಸ್., ಕೆಟ್ಲಿನ್ ಏಂಜೆಲ್ ಪಿಂಟೊ, ಎಲ್ಸಾ ರುಬೆಲ್ ಮೈಸೂರು ವಿಭಾಗಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ತ್ರಿಷ್ಮಾ ಎಸ್. ಪಂದ್ಯಾಟದ ಬೆಸ್ಟ್ ಅಟ್ಯಾಕರ್ ಪ್ರಶಸ್ತಿ ಪಡೆದುಕೊಂಡರು.