

ಕಾರ್ಕಳ: ತಂತ್ರಜ್ಞಾನಗಳ ಔನ್ನತಿಯ ಈ ಕಾಲಘಟ್ಟದಲ್ಲಿ ಹೊಸ ಹೊಸ ರೂಪದೊಂದಿಗೆ ಶಿಕ್ಷಣ ನೀಡಲಾಗುತ್ತಿದೆ. ಇದೇ ಮಾದರಿಯ ಶಿಕ್ಷಣ ಪದ್ಧತಿ ಮೂಲಕ ಶಿಸ್ತು, ಗುಣಮಟ್ಟ ಹಾಗೂ ಜ್ಞಾನಾಧಾರಿತ ಶಿಕ್ಷಣದೊಂದಿಗೆ ವಿದ್ಯಾರ್ಥಿ ಸ್ನೇಹಿ ಶಿಕ್ಷಣ ವ್ಯವಸ್ಥೆ ಅಳವಡಿಸಿಕೊಂಡಿರುವ ಕಾರ್ಕಳದ ಕ್ರೈಸ್ಟ್‌ಕಿಂಗ್ ಶಿಕ್ಷಣ ಸಂಸ್ಥೆ ವಿಭಿನ್ನವಾಗಿ ಕಾಣಿಸುತ್ತಿದೆ.
ದಿ.ರೆ.ಫಾ.ಎಫ್.ಪಿ.ಎಸ್ ಮೊನಿಸ್ ಅವರ ನೇತೃತ್ವದಲ್ಲಿ 1989ರಲ್ಲಿ ಆರಂಭಗೊಂಡ ಸಂಸ್ಥೆ ಬಡ ಮತ್ತು ಗ್ರಾಮೀಣ ವರ್ಗದ ವಿದ್ಯಾರ್ಥಿಗಳಿಗೆ ಜೀವನಕ್ಕಾಗಿ ಶಿಕ್ಷಣ ಎಂಬ ಧ್ಯೇಯದೊಂದಿಗೆ ಮುಂದುವರಿಯುತ್ತಿದೆ. ಇಲ್ಲಿನ ಶೈಕ್ಷಣಿಕ ವಿಶೇಷತೆಗೆ ಐ.ಎಸ್.ಒ 9001:2015 ಪ್ರಮಾಣ ಪತ್ರ, ಕರ್ನಾಟಕದ ಅತ್ಯುತ್ತಮ ಸಾರ್ವಜನಿಕ ಶಿಕ್ಷಣ ಸಂಸ್ಥೆ, ಬೆಸ್ಟ್ ಸ್ಕೂಲ್ ಇನ್ ಕರ್ನಾಟಕ ಫಾರ್ ಟೀಚಿಂಗ್, ಮೋಸ್ಟ್ ಅಡ್ಮೈರ್ಡ್ ಪಬ್ಲಿಕ್ ಸ್ಕೂಲ್ ಇನ್ ಕರ್ನಾಟಕ, ಮೋಸ್ಟ್ ಪ್ರಾಮಿಸಿಂಗ್ ಹಾಗೂ ಟ್ರಸ್ಟೆಡ್ ಪದವಿಪೂರ್ವ ಕಾಲೇಜು ಮುಂತಾದ ಪ್ರಶಸ್ತಿಗಳ ಗರಿ ಈ ಸಂಸ್ಥೆಯ ಮುಡಿಗೇರಿದೆ. ಉಡುಪಿ ಜಿಲ್ಲೆಯಲ್ಲಿಲ್ಲಿ ಅತ್ಯುತ್ತಮ ಫಲಿತಾಂಶ ಹಾಗೂ ಮೌಲ್ಯಯುತ ಶಿಕ್ಷಣಕ್ಕೆ ಈ ಸಂಸ್ಥೆ ಪ್ರಸಿದ್ಧಿ ಪಡೆದಿದೆ. ಎಂಟನೇ ತರಗತಿಯಿಂದ ದ್ವಿತೀಯ ಪಿ.ಯು.ಸಿ ವರೆಗಿನ ಹುಡಗರಿಗೆ ಹಾಗೂ ಹುಡುಗಿಯರಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲಾಗಿದೆ. ಹುಡುಗಿಯರಿಗೆ ನೂತನ ಹಾಸ್ಟೆಲ್ ನಿರ್ಮಾಣಗೊಂಡಿದ್ದು ಈಗಾಗಲೇ ಕಾರ್ಯಾರಂಭ ಮಾಡಿದೆ.
ಸಂಸ್ಥೆಯಲ್ಲಿ ಪೂರ್ವ ಪ್ರಾಥಮಿಕ (ಪ್ರೀ ಕೆಜಿ, ಎಲ್‌ಕೆಜಿ, ಯುಕೆಜಿ), ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನ ತನಕದ ಶಿಕ್ಷಣ ಏಕ ಸೂರಿನಡಿ ಲಭ್ಯವಿದೆ. ಪದವಿ ಪೂರ್ವದಲ್ಲಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳಿದ್ದು ವಿಜ್ಞಾನ ವಿಭಾಗದಲ್ಲಿ ಪಿಸಿಎಂಬಿ, ಪಿಸಿಎಂಸಿ, ಪಿಸಿಎಂಎಸ್ ಕೋರ್ಸ್‌ಗಳು, ವಾಣಿಜ್ಯ ವಿಭಾಗದಲ್ಲಿ ಇಬಿಎಸಿ ಹಾಗೂ ಇಬಿಎಎಸ್, ಎಚ್‌ಇಬಿಎ ಕೋರ್ಸ್‌ಗಳನ್ನು ಅಳವಡಿಸಲಾಗಿದೆ. ನುರಿತ ಹಾಗೂ ಅನುಭವಸ್ಥ ಉಪನ್ಯಾಸಕ ತಂಡದಿಂದ ಸಿ.ಇ.ಟಿ, ನೀಟ್, ಜೆ.ಇ.ಇ ತರಗತಿಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ. ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಸಿ.ಎ, ಸಿ.ಎಸ್ ತರಬೇತಿ ನೀಡಲಾಗುತ್ತಿದೆ.
ಐದನೇ ತರಗತಿಯಿಂದ ಹತ್ತನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಕೌಶಲಾಭಿವೃದ್ಧಿ ಮತ್ತು ಫೌಂಡೇಶನ್ ಕೋರ್ಸ್ ನಡೆಸಲಾಗುತ್ತಿದೆ. ಮಕ್ಕಳನ್ನು ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದಲ್ಲಿಯೇ ಭವಿಷ್ಯದ ನೀಟ್, ಜೆ.ಇ.ಇ, ಸಿ.ಇ.ಟಿ, ಸಿ.ಎ, ಎನ್‌ಡಿಎ, ಕೆವಿಪಿವೈ, ಎನ್‌ಟಿಎಸ್‌ಇ, ಐ.ಎ.ಎಸ್, ಐ.ಪಿ.ಎಸ್ ಹಾಗೂ ಇತರ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರುಗೊಳಿಸುವುದು ಈ ಕೋರ್ಸ್‌ನ ಉದ್ದೇಶ.
ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿಯಲ್ಲಿ ಕ್ವಾಲಿಟಿ ರಿಸಲ್ಟ್ ಇಂಡೆಕ್ಸ್‌ನಲ್ಲಿ ನಿರಂತರವಾಗಿ ಕಾರ್ಕಳ ತಾಲೂಕಿನಲ್ಲಿ ಪ್ರಥಮ ಸ್ಥಾನದಲ್ಲಿರುವುದು ಸಂಸ್ಥೆಯ ವಿಶೇಷತೆಯಾಗಿದೆ. ಕಳೆದ ವರ್ಷ ಹತ್ತನೇ ತರಗತಿಯಲ್ಲಿ ಒಟ್ಟು 9 ವಿದ್ಯಾರ್ಥಿಗಳು 600ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ. 2021-22 ಸಾಲಿನಲ್ಲಿ ಓರ್ವ ವಿದ್ಯಾರ್ಥಿನಿ 625 ರಲ್ಲಿ 625 ಅಂಕಗಳನ್ನು ಪಡೆದು ಕಾರ್ಕಳ ತಾಲೂಕಿನ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಪೂರ್ಣಾಂಕಗಳನ್ನು ಪಡೆದ ದಾಖಲೆಯನ್ನು ನಿರ್ಮಿಸಿದೆ. ಪದವಿಪೂರ್ವ ವಿಭಾಗದಲ್ಲಿ 2023-24 ನೇ ಸಾಲಿನಲ್ಲಿ ರಾಜ್ಯಮಟ್ಟದಲ್ಲಿ ಅಗ್ರ ಹತ್ತರೊಳಗೆ ಹತ್ತು ರ‌್ಯಾಂಕ್‌ಗಳು, 175 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಹಾಗೂ ಪ್ರಸಕ್ತ 2024-25 ನೇ ಸಾಲಿನಲ್ಲಿಯೂ ರಾಜ್ಯಮಟ್ಟದಲ್ಲಿ ಅಗ್ರ ಹತ್ತರೊಳಗೆ ಐದು ರ‌್ಯಾಂಕ್‌ಗಳು ಹಾಗೂ 177 ವಿದ್ಯಾರ್ಥಿಗಳು ಉನ್ನತ ಶ್ರೇಣಿ ಪಡದುಕೊಂಡಿದ್ದಾರೆ, ವಾಣಿಜ್ಯ ವಿಭಾಗದಲ್ಲಿ ಸಂಸ್ಥೆಯು ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಈ ಬಾರಿ ಜೆಇಇಯಲ್ಲಿ ಟಾಪರ್ ವಿದ್ಯಾರ್ಥಿ 99.69 ಪರ್ಸಂಟೈಲ್ ಅಂಕಗಳನ್ನು ಪಡೆದುಕೊಂಡಿದ್ದಾನೆ. ಇಬ್ಬರು ವಿದ್ಯಾರ್ಥಿಗಳು ಸಿಎ ಫೌಂಡೇಷನ್ ಹಾಗೂ ನಾಲ್ಕು ವಿದ್ಯಾರ್ಥಿಗಳು ಸಿಎಸ್‌ಇಇಟಿಯನ್ನು ಪ್ರಥಮ ಪ್ರಯತ್ನದಲ್ಲಿಯೇ ಉತ್ತೀರ್ಣರಾಗಿದ್ದಾರೆ.
ನಗರ ಪ್ರದೇಶದಲ್ಲಿದ್ದರೂ ಗ್ರಾಮೀಣ ಸೊಗಡನ್ನು ಬಿಡದೆ, ಸಾಂಪ್ರದಾಯಿಕ ಪದ್ಧತಿಯೊಂದಿಗೆ ಆಧುನಿಕ ವಿಧಾನಗಳ ಮೂಲಕ ಶಿಕ್ಷಣ ಸೇವೆ ನೀಡುತ್ತಿರುವ ಕ್ರೈಸ್ಟ್‌ಕಿಂಗ್ ಶಿಕ್ಷಣ ಸಂಸ್ಥೆಗಳು ವಿಭಿನ್ನವಾಗಿ ಕಾರ್ಯಾಚರಿಸುತ್ತಿವೆ. ಶಿಕ್ಷಣದ ವ್ಯಾಪಾರೀಕರಣದ ನಡುವೆ ಈ ಶಿಕ್ಷಣ ಸಂಸ್ಥೆ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದ ನಗರ ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ವರದಾನವಾಗಿದೆ.
ಗ್ರಾಮೀಣ ಪ್ರದೇಶದ ಮಕ್ಕಳಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬ ಉದ್ದೇಶದಿಂದ ಕ್ರೈಸ್ಟ್‌ಕಿಂಗ್ ಎಜುಕೇಷನ್ ಟ್ರಸ್ಟ್‌ನಿಂದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣದ ವ್ಯವಸ್ಥೆ ಕಲ್ಪಿಸಿದೆ. 10ನೇ ತರಗತಿಯಲ್ಲಿ ಶೇ.96ಕ್ಕಿಂತ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕದಲ್ಲಿ ಸಂಪೂರ್ಣ ರಿಯಾಯಿತಿ ಸಿಗಲಿದೆ. ಅಲ್ಲದೇ ಹತ್ತನೇ ತರಗತಿಯಲ್ಲಿ ಶೇ.90ರಿಂದ 96ರೊಳಗೆ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕದಲ್ಲಿ ಶೇ.50 ರಿಯಾಯಿತಿ ನೀಡಲಾಗುತ್ತದೆ. ಇದರ ಜೊತೆಗೆ ಕ್ರೀಡಾ ಕ್ಷೇತ್ರದಲ್ಲಿ ರಾಜ್ಯ ಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಶೇ.50 ಶುಲ್ಕ ವಿನಾಯಿತಿ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕದಲ್ಲಿ ಸಂಪೂರ್ಣ ವಿನಾಯಿತಿ ನೀಡಲಾಗುತ್ತದೆ. 2024-25ನೇ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ಒಟ್ಟಾರೆಯಾಗಿ ಸುಮಾರು 38 ಲಕ್ಷದ 24 ಸಾವಿರ ರೂಪಾಯಿಗಳ ಶುಲ್ಕ ಮನ್ನಾ ಮಾಡಲಾಗಿದೆ.
ಪದವಿಪೂರ್ವ ಕಾಲೇಜಿಗೆ 12 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣಗೊಂಡಿದೆ. ಸುಸಜ್ಜಿ ತರಗತಿ ಕೊಠಡಿಗಳು, ವಿಶಾಲ ಗ್ರಂಥಾಲಯ, ಆಧುನಿಕ ಸೌಲಭ್ಯಗಳನ್ನೊಳಗೊಂಡ ಲ್ಯಾಬ್‌ಗಳು, ಕಿರು ಚಿತ್ರಮಂದಿರ, ಎರಡು ಸಾವಿರ ಜನ ಆಸೀನರಾಗಬಹುದಾದ ಬೃಹತ್ ಸಭಾಂಗಣ, ಲಿಫ್ಟ್ ವ್ಯವಸ್ಥೆಗಳನ್ನು ನೂತನ ಕಟ್ಟಡ ಒಳಗೊಂಡಿದೆ.
ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಸಂಸ್ಥೆ- ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಸತತವಾಗಿ ಶೇ.100 ಫಲಿತಾಂಶದ ಹೆಗ್ಗಳಿಕೆ- 2021-22ನೇ ಸಾಲಿನಲ್ಲಿ 10ನೇ ತರಗತಿಯಲ್ಲಿ ಪೂರ್ಣಾಂಕ ಗಳಿಸಿ ವಿದ್ಯಾರ್ಥಿನಿ ದಾಖಲೆ