

ಯಾದವಾಡ: ಗ್ರಾಮದಲ್ಲಿ ಆ.20ರಿಂದ 21ರ ವರೆಗೆ ಶ್ರೀ ಚೌಕೇಶ್ವರ ದೇವಸ್ಥಾನ ಲೋಕಾರ್ಪಣೆ ಹಾಗೂ ಕಳಸಾರೋಹಣ ಕಾರ್ಯಕ್ರಮ ಜರುಗಲಿದೆ.
ಆ.20ರಂದು ವಿವಿಧ ವಾದ್ಯಗಳೊಂದಿಗೆ ಮೂರ್ತಿ ಪುರಪ್ರವೇಶ ನಡೆಯಲಿದೆ. ಆ.21ರಂದು ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಹಾಗೂ ಮಹಾರುದ್ರಾಭಿಷೇಕ, ನವಗ್ರಹ, ಹೋಮ, ಹವನ ನೆರವೇರಲಿದೆ. ಗೋಕಾಕ ಶೂನ್ಯ ಸಂಪಾದನಾ ಮಠದ ಮುರುಘರಾಜೇಂದ್ರ ಸ್ವಾಮೀಜಿ, ಭಾಗೋಜಿಕೊಪ್ಪದ ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ,
ಅಭಿನವ ಚೌಕೇಶ್ವರ ವಿಶ್ವಾರಾಧ್ಯ ಸ್ವಾಮೀಜಿ, ಲಿಂಗಬಸಯ್ಯ ಹಿರೇಮಠ, ಚನ್ನಬಸಪ್ಪ ಮುತ್ಯಾ, ಸಿದ್ದೇಶ್ವರ ಸ್ವಾಮೀಜಿ, ಮಾಳಿಂಗರಾಯ ಆಶ್ರಮದ ಸಿದ್ದಲಿಂಗ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಬಾವನಸೌಂದತ್ತಿಯ ಶಿವಶಂಕರ ಸ್ವಾಮೀಜಿ ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.