ಚೌಡಯ್ಯನವರ ಸಂದೇಶಗಳು ಇಂದಿಗೂ ಪ್ರಸ್ತುತ

25kdr3
Published on

ಕಡೂರು: ಪಟ್ಟಣದ ಪ್ರಮುಖ ರಸ್ತೆಗೆ ಶ್ರೇಷ್ಠ ವಚನಕಾರ ಅಂಬಿಗರ ಚೌಡಯ್ಯ ಅವರ ಹೆಸರನ್ನು ನಾಮಕರಣ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭೆ ಉಪಾಧ್ಯಕ್ಷೆ ಮಂಜುಳಾ ಚಂದ್ರು ಹೇಳಿದರು.

ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 12ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಬಸವಣ್ಣನವರೊಂದಿಗೆ ಚೌಡಯ್ಯನವರು ಸಮಾಜದಲ್ಲಿದ್ದ ಜಾತಿ, ವರ್ಗ, ಮೌಢ್ಯತೆ ವಿರೋಧಿಸಿ ತಮ್ಮ ಕಟುವಾದ ವಚನಗಳ ಮೂಲಕ ಸಮಾಜ ಸುಧಾರಿಸಲು ಹೋರಾಡಿದ ವಚನಕಾರರಾಗಿದ್ದಾರೆ ಎಂದರು.

ಗಂಗಾಮತ ಸಮಾಜ ಅಭಿವೃದ್ದಿ ಹೊಂದಲು ಸಂಘಟನೆ ಮತ್ತು ಶಿಕ್ಷಣ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಸಂಘಟಿತರಾಗಿ ಸಮುದಾಯದ ಉನ್ನತಿಗೆ ಆದ್ಯತೆ ನೀಡಬೇಕು. ಚೌಡಯ್ಯನವರು ಕೊಟ್ಟ ಸಂದೇಶಗಳು ಇಂದಿನ ಸಮಾಜಕ್ಕೆ ಪ್ರಸ್ತುತವಾಗಿವೆ. ಅವರ ಕಾಯಕ, ನಡೆ-ನುಡಿ ಮತ್ತು ಸಂಸ್ಕಾರಗಳನ್ನು ನಾವು ಅಳವಡಿಸಿಕೊಂಡು ಪರಸ್ಪರ ಪ್ರೀತಿ ವಿಶ್ವಾಸ ಬೆಳೆಸಿಕೊಳ್ಳಬೇಕು. ಪಟ್ಟಣದ ಪ್ರಮುಖ ರಸ್ತೆಗೆ ಅಂಬಿಗರ ಚೌಡಯ್ಯನವರ ಹೆಸರನ್ನು ನಾಮಕರಣ ಮಾಡಲು ಪುರಸಭೆ ಅಧ್ಯಕ್ಷರೊಂದಿಗೆ ಚರ್ಚಿಸಲಾಗವುದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net