ಕಮತಗಿಯಲ್ಲಿ ಚೌಡೇಶ್ವರಿ ಜಾತ್ರೆ

Chowdeshwari fair in Kamatagi
ಕಮತಗಿಯಲ್ಲಿ ಮಂಗಳವಾರ ಚೌಡೇಶ್ವರಿ ಜಾತ್ರೆ ಹಿನ್ನೆಲೆಯಲ್ಲಿ ಮೂರ್ತಿ ಮೆರವಣಿಗೆ ಮಾಡಲಾಯಿತು.
Published on

ಕಮತಗಿ : ಪಟ್ಟಣದ ರಾಮಲಿಂಗ ಚೌಡೇಶ್ವರಿ ಜಾತ್ರೆ ಸಂಭ್ರಮದಿಂದ ಮಂಗಳವಾರ ಜರುಗಿತು.

ಬಾದಮಿ ಅಮವಾಸ್ಯೆದಿನದಂದು ಜರುಗುವ ಈ ಜಾತ್ರೆಯು ಪ್ರಸಿದ್ಧಿ ಪಡೆದಿದೆ ಬೆಳಗ್ಗೆ ಚೌಡೇಶ್ವರಿ ದೇವಿಗೆ ಮುಸಂಗಸ್ವಾಮಿ ದೇವಾಂಗಮಠ ಅವರಿಂದ ಪೂಜೆ ನೆರವೇರಿತು. ನಂತರ ಪಟ್ಟಣದ ಭಕ್ತರು ವೇವ್ಯೆದ್ಯ ಸಮರ್ಪಿಸಿದರು.

ಸಂಜೆ 4.30ಕ್ಕೆ ದೇವಿ ಉಪಾಸಕ ಚಂದ್ರು ಅಳ್ಳಿಮನಿ ಚೌಡೇಶ್ವರಿ ದೇವಿಯ ಮುಖವನ್ನು ಧರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಭಕ್ತರಿಗೆ ದರ್ಶನ ನೀಡಿದರು.

ಗಾಂಧಿ ಚೌಕನಲ್ಲಿ ಪೂಜಿಸಿದ ಕಾಯಿ ಸವಾಲು ಮಾಡಲಾಯಿತು. ಶ್ರೀಚೌಡೇಶ್ವರಿ ದೇವಸ್ಥಾನದಲ್ಲಿ ದೇವಿಯಿಂದ ಪೂಜಿಸಲ್ಪಟ್ಟ ಕಾಯಿಗಳನ್ನು ಸವಾಲಿನ ಮೂಲಕ ಭಕ್ತರು ಪಡೆದರು.

ದೇವಾಂಗ ಸಮಾಜದ ಉಪಾಧ್ಯಕ್ಷ ಪ್ರಭಾಕರ ಗಾಡದ, ಕಾರ್ಯದರ್ಶಿ ಈರಣ್ಣ ಯರಗಲ್ಲ, ಖಜಾಂಚಿ ಸಂತೋಷಕುಮಾರ ಗೌಡರ, ವೀರಭದ್ರಪ್ಪ ಆರಿ, ರಾಮಣ್ಣ ವನಕಿ, ಬಸವರಾಜ ಕುಂಬಳಾವತಿ, ಪ್ರಭು ಎತ್ತಿನಮನಿ, ಸೇರಿದಂತೆ ಯುವಕರು, ಮಹಿಳೆಯರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net