28ರಿಂದ ಚೌಡೇಶ್ವರಿ ಅಮ್ಮನವರ ಜಾತ್ರೆ

21-02-2020 ALRp01
Published on

ಆಲೂರು: ತಾಲೂಕಿನ ದೇವರಾಜಪುರ ಗ್ರಾಮದಲ್ಲಿ ಫೆ.28 ಮತ್ತು 29ರಂದು ಶ್ರೀ ಚೌಡೇಶ್ವರಿ ಅಮ್ಮನವರ ಜಾತ್ರೆ ವಿಜೃಂಭಣೆಯಿಂದ ನಡೆಯಲಿದೆ.

28ರಂದು ಅಮ್ಮನವರಿಗೆ ಅಭಿಷೇಕ, ಗಂಗೆ ಪೂಜೆ, ಕೊಂಡೋತ್ಸವ ಮತ್ತು ರಾತ್ರಿ ಸಂಗೀತ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ.

29ರಂದು ಮಹಾಮಂಗಳಾರತಿ, ಪ್ರಸಾದ ವಿನಿಯೋದದ ಬಳಿಕ ಸಂಜೆ 4 ಗಂಟೆಗೆ ಸಿಡಿ ಹಬ್ಬ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net