

ಮಸ್ಕಿ: ಪಟ್ಟಣದ ಹಳೇ ಪೊಲೀಸ್ ಠಾಣೆ ಬಳಿ ಕಲ್ಗುಡಿ ಚೌಡೇಶ್ವರಿ ದೇವಿ ರಥೋತ್ಸವ ಸೋಮವಾರ ಅದ್ದೂರಿಯಾಗಿ ಜರುಗಿತು.
ಬೆಳಗ್ಗೆ 6 ಗಂಟೆಗೆ ಚೌಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸಂಜೆ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ಗುಡಿ ಸುತ್ತ ಪ್ರದಕ್ಷಿಣೆ ಹಾಕಲಾಯಿತು. ನಂತರ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು.
ಬಳಿಕ ಭಕ್ತರ ಜಯಘೋಷಗಳ ಮಧ್ಯೆ ರಥವನ್ನು ಪಾದಗಟ್ಟೆವರೆಗೆ ಎಳೆಯಲಾಯಿತು.
ದೇವಾಂಗ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಕುಚ್ಛಾ, ಮುಖಂಡರಾದ ಶಿವಶಂಕ್ರಪ್ಪ ಹಳ್ಳಿ, ಶಂಕ್ರಪ್ಪ ಜೋಗಿನ್, ಅಂದಾನಪ್ಪ ಗುಂಡಳ್ಳಿ, ಸೀನಯ್ಯ ಇಲ್ಲೂರು, ಷಡಕ್ಷರಪ್ಪ ಬಾಳೇಕಾಯಿ, ಅಪ್ಪಾಜಿಗೌಡ ಪಾಟೀಲ, ಅಭಿಜಿತ್ ಪಾಟೀಲ, ಆದಯ್ಯ ಸ್ವಾಮಿ ಕ್ಯಾತ್ನಟ್ಟಿ, ಲಕ್ಷ್ಮೀನಾರಾಯಣ ಶೆಟ್ಟಿ, ಮಂಜುನಾಥ ಬಿಜ್ಜಳ, ಚಿದಾನಂದ ಜೋಗಿನ್, ಮಹಾಂತೇಶ ಮಸ್ಕಿ, ದಯಾನಂದ ಜೋಗಿನ್, ಮಂಜುನಾಥ ಮಾಳ್ಗಿ ಇತರರಿದ್ದರು.