

ಚಿಕ್ಕಮಗಳೂರು: ಜಿ.ವಿ.ಚೂಡಾನಾಥ ಅಯ್ಯರ್ ಅವರು ನಿರ್ಭೀತ ಪತ್ರಿಕೋದ್ಯಮ ನಡೆಸಿದ ಜೊತೆಗೆ ಸಾಮಾಜಿಕವಾಗಿ ಅನೇಕ ಜವಾಬ್ದಾರಿಗಳನ್ನು ನಿಭಾಯಿಸಿ ಜಿಲ್ಲೆಯ ಮೂಲೆ ಮೂಲೆಗಳಲ್ಲಿ ಪರಿಚಿತರಾಗಿ ಉಳಿದಿದ್ದಾರೆ ಎಂದು ಹಿರಿಯ ಪತ್ರಕರ್ತ ಸ.ಗಿರಿಜಾ ಶಂಕರ್ ತಿಳಿಸಿದರು.
ನಗರದ ಬ್ರಹ್ಮಸಮುದ್ರ ರಂಗಣ್ಣವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಚೂಡಾನಾಥ ಅಯ್ಯರ್ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಹುಟ್ಟು ಸಾವಿನ ಮಧ್ಯೆ ಹೆಜ್ಜೆ ಗುರುತು ಮೂಡಿಸಿದವರು ಅನೇಕರ ಹೃದಯಗಳಲ್ಲಿ ಹೃದಯಸ್ತರಾಗುತ್ತಾರೆ. ಹಾಗೆಯೇ ಅಯ್ಯರ್ ಅವರು ಒಳ್ಳೆಯ ಪತ್ರಿಕೆಯನ್ನು ನಡೆಸುವ ಮೂಲಕ ಅನೇಕರ ಮನಸ್ಸಿನಲ್ಲಿ ಉಳಿದಿದ್ದಾರೆ ಎಂದರು.
ಅಯ್ಯರ್ ತುಂಬಾ ಧೈರ್ಯವಂತ ಮನುಷ್ಯರಾಗಿದ್ದರು. ಎಷ್ಟೇ ಕೋಪ ಮಾಡಿಕೊಂಡರು ಅಷ್ಟೇ ಬೇಗನೆ ಮೃಧುವಾಗಿಬಿಡುತ್ತಿದ್ದರು. ಯಾರ ಮೇಲೂ ದ್ವೇಷ ಸಾಧಿಸಿದವರಲ್ಲ. ಈ ಕಾರಣಕ್ಕೆ ಅವರ ಪತ್ರಿಕೆ, ಬರಹ ಎಂದಿಗೂ ಬ್ಲಾಕ್ ಮೇಲ್ ಎನಿಸಲಿಲ್ಲ ಎಂದು ಹೇಳಿದರು.
ಆರ್‌ಎಸ್‌ಎಸ್‌ನ ಅನೇಕ ಕಾರ್ಯಕ್ರಮಗಳಲ್ಲಿ ಭಾಗಹಿಸುವ ಮೂಲಕ, ಎಬಿವಿಪಿ ಸ್ಥಾಪನೆ ಸೇರಿದಂತೆ ಸಾಮಾಜಿಕವಾಗಿ ಸಹ ಅನೇಕ ಜವಾಬ್ದಾರಿಗಳನ್ನು ತೆಗೆದುಕೊ ನಿಭಾಯಿಸಿದ್ದರು ಎಂದರು.
ಹರಿಹರಪುರ ಪ್ರಬೋಧಿನಿ ಗುರುಕುಲದ ಮುಖ್ಯಸ್ಥ ಉಮೇಶ್ ರಾವ್ ಮಾತನಾಡಿ, ಅಯ್ಯರ್ ಅವರು ರಾಷ್ಟಿçÃಯ ವಿಚಾರಧಾರೆಗಳಿಗೆ ಹಾಗೂ ಹಿಂದುತ್ವದ ವಿಷಯಕ್ಕೆ ಒತ್ತು ಕೊಟ್ಟು ಕೆಲಸ ಮಾಡಿದವರು. ಸಂಘದ ಹಿರಿಯರ ಜೊತೆ ಒಳ್ಳೆಯ ಸಂಬAಧವನ್ನು ಇಟ್ಟುಕೊಂಡಿದ್ದರು. ಅವರ ಸಾಮಾಜಿಕ ಕಾರ್ಯಗಳನ್ನು ಮುಂದಕ್ಕೆ ಕೊಂಡೊಯ್ಯುವ ಕೆಲಸ ಆಗಬೇಕು ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್, ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಯಜ್ಞಪುರುಷ ಭಟ್, ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಮಂಜುನಾಥ ಜೋಷಿ, ಹಾಸನದ ರಾಷ್ಟçಸೇವಿಕಾ ಸಮಿತಿಯ ಶಾಂತಕ್ಕ, ಚಂದ್ರಬಿAಬ ಪತ್ರಿಕೆ ಸಂಪಾದಕಿ ವಾಣಿ ಚಂದ್ರಯ್ಯ ನಾಯ್ಡು, ಪತ್ರಕರ್ತ ಸಿ.ಸುರೇಶ್, ಪ್ರಮುಖರಾದ ಸೀತಾರಾಮ ಭರಣ್ಯ, ಮಂಜುನಾಥ ಕಾಮತ್, ಭಂಡೀಗಡಿ ಶಿವಸ್ವಾಮಿ ಮತ್ತಿತರರಿದ್ದರು.