ಬೆಳ್ಳಾರೆ ಝಕರಿಯಾ ಜಮಾತ್ ಮಾಸ್‌ಗೆ ಆಯ್ಕೆ

Published on

ಸುಳ್ಯ: ಬೆಳ್ಳಾರೆ ಝಕರಿಯಾ ಜಮಾತ್ ಮಾಸ್ಕ್(ಝಕರಿಯಾ ಜುಮ್ಮಾ ಮಸ್ಜಿದ್) ಆಡಳಿತ ಸಮಿತಿಗೆ 11 ಸದಸ್ಯರನ್ನು ಚುನಾಯಿಸಲಾಯಿತು. ದ.ಕ ಜಿಲ್ಲಾ ವಕ್ಫ್ ಅಧಿಕಾರಿಗಳು ಹಾಗೂ ಮಸೀದಿ ಚುನಾವಣಾಧಿಕಾರಿ ಸಮ್ಮುಖ ಆಡಳಿತ ಸಮಿತಿಗೆ ಆಯ್ಕೆಯಾದ ಸದಸ್ಯರ ಸಭೆ ಮಂಗಳೂರಿನ ಪಾಂಡೇಶ್ವರದ ಅಲ್ಪಸಂಖ್ಯಾತರ ಕಲ್ಯಾಣ ಭವನದಲ್ಲಿ ಸಭೆ ನಡೆಯಿತು. ಅಧ್ಯಕ್ಷರಾಗಿ ಅಬೂಬಕ್ಕರ್ ಯು.ಎಚ್., ಉಪಾಧ್ಯಕ್ಷ-ಅಬ್ದುಲ್ ಖಾದರ್, ಕಾರ್ಯದರ್ಶಿ-ಅಬ್ದುಲ್ ರಹಿಮಾನ್ ಕೆ., ಕೋಶಾಧಿಕಾರಿ-ಅಬ್ದುಲ್ ನಾಸೀರ್ ಯು.ಎ. ಅವಿರೋಧವಾಗಿ ಆಯ್ಕೆಗೊಂಡರು. ಸದಸ್ಯರಾಗಿ ಇಸ್ಮಾಯಿಲ್ ಬಿ., ಹಮೀದ್ ಎಚ್.ಎಂ., ಹಸೈನಾರ್ ಬಿ., ಅಝರುದ್ದೀನ್ ಯು., ಹನೀಫ್ ಎನ್., ಹನೀಫ್ ಕೆಎಂ., ಅಬ್ದುಲ್ ಬಶೀರ್ ಆಯ್ಕೆಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net