ಚುಟುಕು ಸಾಹಿತ್ಯ ಪರಿಷತ್ ಸಂಚಾಲಕರಾಗಿ ಆಯ್ಕೆ

Ksd_Chutuku Sahitya
Published on

ಕಾಸರಗೋಡು: ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಕೇರಳ ರಾಜ್ಯ ಸಂಚಾಲಕರಾಗಿ ಕಾಸರಗೋಡು ಕನ್ನಡ ಭವನದ ಡಾ. ವಾಮನ್ ರಾವ್ ಬೇಕಲ್ ಆಯ್ಕೆಯಾಗಿದ್ದಾರೆ. ಕರ್ನಾಟಕದ ಪ್ರತಿ ಜಿಲ್ಲೆ, ತಾಲೂಕುಗಳಲ್ಲಿ ಘಟಕ ಹೊಂದಿ, ಕನ್ನಡ ಸಾಹಿತ್ಯಾಭಿಮಾನ, ಭಾಷಾಭಿಮಾನ, ಬೆಳೆಸಿ, ಪುಸ್ತಕ ದಾಸೋಹ ಮೂಲಕ ಸುಮಾರು ಮೂರು ಲಕ್ಷ ಪುಸ್ತಕ ವಿತರಿಸಿ, ಇಡೀ ಕರ್ನಾಟಕದಲ್ಲಿ ತನ್ನದೇ ಆದ ಸ್ಥಾನ ಮಾನ, ಜನಮನ್ನಣೆ ಗಳಿಸುತ್ತಿರುವ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಇದೀಗ ಕೇರಳ ರಾಜ್ಯದಲ್ಲಿ ತನ್ನ ಕನ್ನಡ ಪರ ಚಟುವಟಿಕೆಯನ್ನು ವಿಸ್ತರಿಸಲು ಮುಂದಾಗಿದೆ.

ಸಾಹಿತ್ಯ, ಕಲೆ, ಕನ್ನಡ ಸಂಸ್ಕೃತಿ, ನಾಡು-ನುಡಿ, ಪುಸ್ತಕ ಪ್ರೀತಿ, ಪುಸ್ತಕ ದಾಸೋಹ, ಕವಿಮನಸ್ಸು-ಸವಿಮನಸ್ಸು ಗಳನ್ನು ಪ್ರೋತ್ಸಾಹಿಸಿ ಸಂಸ್ಥೆಯನ್ನು ಜನಪ್ರಿಯಗೊಳಿಸುವ ಬಗ್ಗೆ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ, ಹುಬ್ಬಳ್ಳಿ ಸಂಸ್ಥಾಪಕ ಅಧ್ಯಕ್ಷ ಕೃಷ್ಣ ಮೂರ್ತಿ ಕುಲಕರ್ಣಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net