‘ಚೋರ ಚರಣದಾಸ’ ನಾಟಕ ಪ್ರದರ್ಶನ

Drama 6x4
Published on

ಮೈಸೂರು: ರಾಮಕೃಷ್ಣನಗರದಲ್ಲಿರುವ ಮಂಡ್ಯ ರಮೇಶ್ ನೇತೃತ್ವದ ನಟನ ರಂಗಶಾಲೆಯಲ್ಲಿ ಜ.1 ರಂದು ಸಂಜೆ 6.30ಕ್ಕೆ ‘ಚೋರ ಚರಣದಾಸ’ ನಾಟಕ ಪ್ರದರ್ಶನ ಆಯೋಜಿಸಲಾಗಿದೆ.


ಹಬೀಬ್ ತನ್ವೀರ್ ಅವರ ಈ ನಾಟಕವನ್ನು ಮಂಡ್ಯ ರಮೇಶ್ ನಿರ್ದೇಶಿಸಿದ್ದಾರೆ. ಮೂರು ದಶಕಗಳಷ್ಟು ಹಿಂದಿನ ಈ ನಾಟಕವು ಸಾರ್ವಕಾಲಿಕವೆನ್ನುವಷ್ಟು ನೂತನ ಸತ್ಯಗಳನೇಕವನ್ನು ಧ್ವನಿಸುತ್ತದೆ. ಪ್ರಸ್ತುತ ಪ್ರಯೋಗವನ್ನು ಅತ್ಯಂತ ಹಾಸ್ಯಮಯವಾಗಿ ಮತ್ತು ವಿಡಂಬನಾತ್ಮಕವಾಗಿ ಕೃತಿಯ ಆಂತರಿಕ ಧ್ವನಿಯೊಂದಿಗೆ ಈ ಜಾಯಮಾನಕ್ಕೆ ಒಗ್ಗುವ ಹಾಗೆ ಕಟ್ಟಲಾಗಿದ್ದು, ಇದು 271ನೇ ಪ್ರದರ್ಶನವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net