ಒತ್ತಡಕ್ಕೆ ಮಣಿಯುವ ಬದಲು ಆಸಕ್ತಿಯ ಕ್ಷೇತ್ರ ಆಯ್ಕೆ

Ull_Yuvavahini
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಮಕ್ಕಳಿಗೆ ಆಸಕ್ತಿಯಿರುವ ಕ್ಷೇತ್ರದಲ್ಲಿ ಮುಂದುವರಿಯಲು ಪಾಲಕರ ಸಹಕಾರ ಅಗತ್ಯ. ಪಾಲಕರು ಅಥವಾ ಯಾರದ್ದೋ ಒತ್ತಡಕ್ಕೆ ಮಕ್ಕಳು ಮಣಿಯದೆ ತಮ್ಮ ಆಸಕ್ತಿಯ ಕ್ಷೇತ್ರ ಆಯ್ಕೆ ವಾಡಿ ಮುಂದುವರಿಯಬೇಕು. ಯಶಸ್ಸು ಎನ್ನುವುದು ಒಂದು ದಿನ ಅಥವಾ ಒಂದು ವರ್ಷದಲ್ಲಿ ಸಾಧಿಸುವ ವಿಚಾರವಲ್ಲ ಎಂದು ವೈದ್ಯಕೀಯ ವಿದ್ಯಾರ್ಥಿನಿ ಶ್ರಾವ್ಯಶ್ರೀ ಹೇಳಿದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯವವಾಹಿನಿ ಗ್ರಾಮಚಾವಡಿ, ಕೊಣಾಜೆ ಟಕದ ಆಶ್ರಯದಲ್ಲಿ ಗ್ರಾಮಚಾವಡಿಯಲ್ಲಿ ಗುರುವಾರ ಮಕ್ಕಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಯುವವಾಹಿನಿ ಗ್ರಾಮಚಾವಡಿ ಕೊಣಾಜೆ ಟಕದ ಅಧ್ಯಕ್ಷ ಹರೀಶ್ ಪೂಜಾರಿ ಕೊಣಾಜೆ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಸೂರ್ಯಕಾಂತಿ ಚಾರಿಟೆಬಲ್ ಫೌಂಡೇಶನ್ ಅಧ್ಯಕ್ಷೆ ವಿದ್ಯಾ ರಾಕೇಶ್, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂ ಗ್ರಾಮಚಾವಡಿ ಕೊಣಾಜೆ ಟಕ ಅಧ್ಯಕ್ಷ ರವೀಂದ್ರ ಬಂಗೇರ ಕೊಣಾಜೆ, ಯುವವಾಹಿನಿ ವಿದ್ಯಾನಿಧಿ ನಿರ್ದೇಶಕಿ ಅನಿತಾ ಹರೇಕಳ ಮೊದಲಾದವರು ಉಪಸ್ಥಿತರಿದ್ದರು.

ಅನಿತಾ ಸ್ವಾಗತಿಸಿದರು. ಪ್ರವೀಣ್ ಇನೋಳಿ ಬಹುವಾನಿತರ ಹೆಸರು ವಾಚಿಸಿದರು. ಸೌಮ್ಯಾ ವಂದಿಸಿದರು. ಅಭಿಜ್ಞಾ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net