ರಾಜ್ಯದಲ್ಲಿ ಒಟ್ಟು 6 ಕಾಲರಾ ಪ್ರಕರಣಗಳು ಪತ್ತೆ: ಆರೋಗ್ಯ ಇಲಾಖೆ ಆಯುಕ್ತ ಡಿ.ರಂದೀಪ್

randeep
Published on

ಬೆಂಗಳೂರು: ಹೆಚ್ಚಾದ ತಾಪಮಾನದ ಪರಿಣಾಮವಾಗಿ ಕಾಲರಾ ರೋಗ ಹೆಚ್ಚಾಗುತ್ತಿದ್ದು, ರಾಜ್ಯಾದ್ಯಂತ 6 ಮಂದಿಯಲ್ಲಿ ಕಾಲರಾ ರೋಗ ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.      

ಇಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಡಿ. ರಂದೀಪ್ ಅವರು ಸುದ್ದಿಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿದ್ದಾರೆ.  ಬಿಸಿಲ ತಾಪ ಹೆಚ್ಚಾಗುತ್ತಿರೋದು, ಬಿಸಿಗಾಳಿಯ ಪರಿಣಾಮವೇ ಕಾಲರಾ ಹೆಚ್ಚಳಕ್ಕೆ ಕಾರಣ ಎಂಬುದಾಗಿ ಅವರು ತಿಳಿಸಿದ್ದಾರೆ.  

ಬೆಂಗಳೂರಿನಲ್ಲಿ ಇಬ್ಬರಿಗೆ ಕಾಲರಾ ದೃಢಪಟ್ಟರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮೂವರಿಗೆ ಕಾಲರಾ ಸೋಂಕು ತಗುಲಿರೋದು ಪರೀಕ್ಷೆಯಲ್ಲಿ ತಿಳಿದು ಬಂದಿದೆ. ರಾಮನಗರದಲ್ಲಿ ಒಬ್ಬ ವ್ಯಕ್ತಿ ಸೇರಿದಂತೆ 6 ಮಂದಿಗೆ ಕಾಲರಾ ದೃಢಪಟ್ಟಿದೆ.

ರಾಜ್ಯದಲ್ಲಿ ಕಾಲರಾ ತಡೆಗಾಗಿ ಆರೋಗ್ಯ ಇಲಾಖೆ ಕ್ರಮವಹಿಸಿದೆ. ಇಂದು ತಡರಾತ್ರಿ ರಾಜ್ಯದಲ್ಲಿ ಕಾಲರಾ ರೋಗ ತಡೆ ಸಂಬಂಧ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟಿಸಲಾಗುತ್ತದೆ ಎಂದರು.

ಬಿಸಿಗಾಳಿ ಹೆಚ್ಚಾಗುತ್ತಿರೋ ಕಾರಣ ವ್ಯಕ್ತಿಯೊಬ್ಬರು ರಾಜ್ಯದಲ್ಲಿ ಸಾವನ್ನಪ್ಪಿದ್ದಾರೆ. ಅವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆ ಬಗ್ಗೆ ಪರೀಕ್ಷೆ ನಡೆಸಲಾಗುತ್ತಿದೆ ಎಂದು ರಂದೀಪ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net