ಚೋಚೋಳಿ: ಬಸ್ ಡಿಕ್ಕಿ, ಪಾದಚಾರಿ ಸಾವು

bus accident
Published on

ಚಿಂಚೋಳಿ: ತಾಲೂಕಿನ ಯಂಪಳ್ಳಿ ಗ್ರಾಮದಲ್ಲಿ ಮಂಗಳವಾರ ಬೆಳ್ಳಂ ಬೆಳಿಗ್ಗೆ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ಸ್ ಡಿಕ್ಕಿ ಹೊಡೆದು ಪಾದಚಾರಿ ವೃದ್ಧ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜರುಗಿದೆ.

ಗ್ರಾಮದ ನಿವಾಸಿ ಬಕ್ಕಯ್ಯ ತಂದೆ ಯಲ್ಲಯ್ಯ (65) ಎನ್ನುವವರು ಬಹಿರ್ದಸೆಗೆ ಹೋಗಿ ಮರುಳಾಗುವ ಹಸರಗುಂಡಗಿ ಮಾರ್ಗವಾಗಿ ಚಿಂಚೋಳಿಗೆ ಬರುತ್ತಿರುವ ಬಸ್ಸ್ ಬೆಳಿಗ್ಗೆ 6.45 ರ ಸುಮಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಚಿಂಚೋಳಿ ಪೋಲಿಸ್ ಠಾಣೆ ಪಿಎಸ್ಐ ಹಣಮಂತಪ್ಪ ಬಂಕಲಗಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net