ಗ್ರಾಮೀಣ ಯುವಜನರು ಸ್ವಾವಲಂಬನೆ ಸಾಧಿಸಬೇಕು

27-kollegal-1,,,
Published on

ಕೊಳ್ಳೇಗಾಲ : ಗ್ರಾಮೀಣ ಭಾಗದ ಯುವಜನರು ಸ್ವಾವಲಂಬನೆ ಸಾಧಿಸಬೇಕು ಎಂದು ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕ ಶಶಿಧರ್ ಹೇಳಿದರು.
ತಾಲೂಕಿನ ಪಾಳ್ಯ ಗ್ರಾಮದಲ್ಲಿ ಶನಿವಾರ ಭಾರತ ಸರ್ಕಾರ ಕೈಮಗ್ಗ ಮತ್ತು ಜವಳಿ ಇಲಾಖೆ, ಬೆಂಗಳೂರಿನ ಕೈ ಮಗ್ಗ ನೇಕಾರರ ಸೇವಾ ಕೇಂದ್ರ ಹಾಗೂ ಜಿಲ್ಲಾ ಕೈ ಮಗ್ಗ ಮತ್ತು ಜವಳಿ ಇಲಾಖೆಯ ‘ಸಮರ್ಥ್’ ನೂತನ ಕೈಮಗ್ಗ ತರಬೇತಿ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಶದಲ್ಲಿ ವಿವಿಧೆಡೆ ಸ್ಥಾಪನೆ ಮಾಡಿರುವ ನೂತನ ಕೈಮಗ್ಗ ತರಬೇತಿ ಕೇಂದ್ರಕ್ಕೆ ಶನಿವಾರ ಕೇಂದ್ರದ ಜವಳಿ ಸಚಿವರು ಚಾಲನೆ ನೀಡಿದ್ದಾರೆ. ಅದರಲ್ಲಿ ರಾಜ್ಯದ ಹೊಸಪೇಟೆ ಮತ್ತು ಪಾಳ್ಯದ ಕೇಂದ್ರವೂ ಸೇರಿದೆ.
ಇಂತಹ ಮಹತ್ವಾಕಾಂಕ್ಷೆಯ ಯೋಜನೆ ನಿಮ್ಮೂರಿಗೆ ಬಂದಿರುವುದು ಯೋಗವೇ ಸರಿ ಎಂದರು. ಸೂಕ್ತ ತರಬೇತಿ ಪಡೆದುಕೊಂಡು ಕೇಂದ್ರದ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಮೊದಲ ಹಂತದಲ್ಲಿ 25 ಜನರಿಗೆ 45 ದಿನ ತರಬೇತಿ ನೀಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net