ಶರಣಪ್ಪ ಪಾಟೀಲ್ ತಾಲೂಕು ಅಧ್ಯಕ್ಷ

PH 05
Published on

ಚಿಂಚೋಳಿ: ಅಖಿಲ ಭಾರತ ವೀರಶೈವ ಮಹಾಸಭೆ ತಾಲೂಕು ಅಧ್ಯಕ್ಷರಾಗಿ ಶರಣಪ್ಪ ಪಾಟೀಲ್ ಆಯ್ಕೆಯಾಗಿದ್ದಾರೆ.

ವೀರೇಂದ್ರ ಪಾಟೀಲ್ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ ಚುನಾವಣೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಶರಣಪ್ಪ ಪಾಟೀಲ್, ದಿನೇಶ ದುಗ್ಗಾಣಿ, ಭೀಮಶೆಟ್ಟಿ ಮುಕ್ಕಾ ನಾಮಪತ್ರ ಸಲ್ಲಿಸಿದ್ದರು. ಒಟ್ಟು 241 ಮತಗಳು ಚಲಾವಣೆಯಾಗಿದ್ದು, ಶರಣಪ್ಪ 96 ವೋಟ್‌ಗಳೊಂದಿಗೆ ಭರ್ಜರಿ ಗೆಲುವು ಪಡೆದಿದ್ದಾರೆ. ಪ್ರತಿಸ್ಪರ್ಧಿಗಳಾದ ದಿನೇಶ 49 ಹಾಗೂ ಭೀಮಶೆಟ್ಟಿ 93 ಮತ ಪಡೆದು ಪರಾಭವಗೊಂಡರು. ಮೂರು ಮತಗಳು ತಿರಸ್ಕೃತಗೊಂಡಿವೆ.
20 ಸದಸ್ಯ ಸ್ಥಾನವಿದ್ದು, 7 ಮಹಿಳೆಯರು, 13 ಪುರುಷರಿಗೆ ಮೀಸಲಿದೆ. ಸದಸ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಮಲ್ಲಿಕಾರ್ಜುನ ಪಾಲಾಮೂರ, ಶಿವಕುಮಾರ ಮೂಲಗಿ, ಶರಣಮ್ಮ ಶರಣಪ್ಪ ಅವಿರೋಧ ಆಯ್ಕೆಯಾಗಿದ್ದಾರೆ. ಇನ್ನುಳಿದ ಸ್ಥಾನಗಳಿಗೆ ಅಧ್ಯಕ್ಷರು ನೇಮಕ ಮಾಡಿಕೊಳ್ಳಲಿದ್ದಾರೆ ಎಂದು ಚುನಾವಣಾಧಿಕಾರಿಗಳಾದ ಶರಣಬಸಪ್ಪ ಕಾಡದ್, ನಂದಕುಮಾರ ತಿಳಿಸಿದ್ದಾರೆ.

ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷರಾಗಿ ಶರಣಪ್ಪ ಪಾಟೀಲ್ ಆಯ್ಕೆಯಾಗುತ್ತಿದ್ದಂತೆ ಅಭಿಮಾನಿಗಳು ಪಟಾಕಿ ಸಿಡಿಸಿ ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು. ಪ್ರಮುಖರಾದ ಅಜೀತ್ ಪಾಟೀಲ್, ನೀಲಕಂಠ ಸೀಳಿನ್, ಶಂಕರ ಶಿವಪೂರಿ, ವೀರೇಶ ಯಂಪಳ್ಳಿ, ಸುರೇಶ ಸುಂಕದ, ಮಂಜುನಾಥ ಸುನಗಮಠ, ಜಗನ್ನಾಥ ಇದಲಾಯಿ, ಮಲ್ಲಿಕಾರ್ಜುನ ಬುಶೇಟ್ಟಿ, ಮಧುಸೂದನರೆಡ್ಡಿ ಶೇರಿಕಾರ್, ಶಿವರಾಜ ಪಾಟೀಲ್, ಸುರೇಶ ದೇಶಪಾಂಡೆ, ಬಸವರಾಜ ಚನ್ನೂರ, ಜಗನ್ನಾಥ ಚಟ್ನಳ್ಳಿ, ಆನಂದ ಹಿತ್ತಲ್, ಸಂತೋಷ, ಸಂಜುಕುಮಾರ ಪಾಟೀಲ್, ರೇವಣಸಿದ್ದಪ್ಪ ಬಡಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net