ರೇವಗ್ಗಿ ದೇಗುಲಕ್ಕೆ ಶ್ರೀ ರೇಣುಕಾಚಾರ್ಯರ ಬೆಳ್ಳಿ ಮೂರ್ತಿ ನೀಡಿ ಹರಕೆ ತೀರಿಸಿದ ಉದ್ಯಮಿ

PH 02
Published on

ಚಿಂಚೋಳಿ: ಕಾಳಗಿ ತಾಲೂಕಿನ ಪುಣ್ಯಕ್ಷೇತ್ರವಾದ ರೇವಗ್ಗಿ ಬೆಟ್ಟದ ಶ್ರೀ ರೇವಣಸಿದ್ಧೇಶ್ವರ ದೇವಾಲಯಕ್ಕೆ ಶ್ರೀ ರೇಣುಕಾಚಾರ್ಯರ ಬೆಳ್ಳಿಯ ಮೂರ್ತಿಯನ್ನು ನೀಡುವ ಮೂಲಕ ಕಲಬುರಗಿಯ ಉದ್ಯಮಿಯೊಬ್ಬರು ಹರಕೆ ತೀರಿಸಿದ್ದಾರೆ.

ಕಲಬುರಗಿಯ ಉದ್ಯಮಿ ಎಂ.ಎಂ. ಚಿಕ್ಕಮಠ ಎಂಬುವವರು ಈ ಹಿಂದೆ ರೇವಣಸಿದ್ಧೇಶ್ವರರಲ್ಲಿ ವಿಶೇಷ ಪೂಜೆ ಸಲ್ಲಿಸಿ, ಬೆಳ್ಳಿಯ ಮೂರ್ತಿಯನ್ನು ಪ್ರತಿಷ್ಠಾಪಿಸುವುದಾಗಿ ಬೇಡಿಕೆಗೊಂಡಿದ್ದರು. ಹೀಗಾಗಿ ಬುಧವಾರ ಕುಟುಂಬ ಸಮೇತವಾಗಿ ಗುಡ್ಡಕ್ಕೆ ಆಗಮಿಸಿ, ಮೂಲ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ದೇವಸ್ಥಾನದ ಆವರಣದಲ್ಲಿ ಸ್ಪಟಿಕ ಲಿಂಗದಲ್ಲಿ ಶ್ರೀ ರೇಣುಕಾಚಾರ್ಯರ ಉದ್ಭವ ಬೆಳ್ಳಿಯ ಮೂರ್ತಿ ಮೆರವಣಿಗೆಯನ್ನು ನಡೆಸಿ, ಪ್ರತಿಷ್ಠಾಪಿಸಲಾಯಿತು.

ವಿವಿಧ ಮಠಾಧೀಶರು ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು. ಗೀರಿಶ್ ದೇವರಮನೆ, ಚನ್ನಬಸಪ್ಪ ದೇವರಮನೆ, ಶಿವರಾಜ ಪಾಟೀಲ್ ಗೋಣಗಿ, ಸಿದ್ದಯ್ಯ ಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net