ಮರಡಿಗುಡ್ಡ ದೇಗುಲದ ಹುಂಡಿ ಹಣ ಕಳವು

3-KGL-5,,, HUNDI
Published on

ಕೊಳ್ಳೇಗಾಲ : ಪಟ್ಟಣದ ಮರಡಿಗುಡ್ಡದ ಮೇಲಿರುವ ಶ್ರೀ ಮಹದೇಶ್ವರ ದೇವಸ್ಥಾನದ ಬಾಗಿಲನ್ನು ಶನಿವಾರ ರಾತ್ರಿ ದುಷ್ಕರ್ಮಿಗಳು ಮುರಿದು ಒಳನುಗ್ಗಿ ಹುಂಡಿಯಲ್ಲಿದ್ದ ಹಣ ಕಳವು ಮಾಡಿದ್ದಾರೆ.

ವಿಗ್ರಹ ಸೇರಿದಂತೆ ಉಳಿದ ಯಾವುದೇ ವಸ್ತುಗಳನ್ನು ಕಳ್ಳತನ ಮಾಡಿಲ್ಲ. ಈ ಸಂಬಂಧ ಅರ್ಚಕ ಶ್ರೀನಿವಾಸ

ಶಾಸ್ತ್ರಿ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಅಪರಾಧ ವಿಭಾಗದ ಸಬ್ ಇನ್ಸ್‌ಪೆಕ್ಟರ್ ಉಮಾವತಿ, ಸ್ಥಳದ ಮಹಜರ್ ನಡೆಸಿ ಕಳ್ಳರ ಪತ್ತೆಗೆ ಕ್ರಮ ವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net