ಚಿಂಚೋಳಿ; ಅಂಗನವಾಡಿ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

PH 01
Published on

ಚಿಂಚೋಳಿ: ತಾಲೂಕಿನ ವ್ಯಾಪ್ತಿಯಲ್ಲಿ ಬರುವ 26 ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರ ಹಾಗೂ 39 ಅಂಗನವಾಡಿ ಸಹಾಯಕಿಯರ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗುರುಪ್ರಸಾದ್ ಕವಿತಾಳ ತಿಳಿಸಿದ್ದಾರೆ.

ಹುದ್ದೆಗಳ ತಾತ್ಕಾಲಿಕ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಶಿಶು ಅಭಿವೃದ್ಧಿ ಕಛೇರಿ ಫಲಕದಲ್ಲಿ ಆ.24 ರಂದು ಪ್ರಕಟಿಸಲಾಗಿದೆ. ತಕರಾರು, ಆಕ್ಷೇಪಣೆ ಇದ್ದಲ್ಲಿ ಸೆ. 1ರಂದು ಸಂಜೆ 5.30ರ ಒಳಗೆ ಕಚೇರಿಗೆ ಖುದ್ದು ಭೇಟಿ ನೀಡಿ ಮೂಲ ದಾಖಲೆಗಳೊಂದಿಗೆ ಲಿಖಿತ ಆಕ್ಷೇಪಣೆ ಸಲ್ಲಿಸಬೇಕು. ಸಮಯ ಮೀರಿ ಬಂದರೆ ಆಕ್ಷೇಪಣೆ ಸ್ವೀಕರಿಸುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net