

ಪರಶುರಾಮಪುರ: ಕವಾಡಿಗರಹಟ್ಟಿ ಪ್ರಕರಣ ಬಳಿಕ ಶುದ್ಧ ನೀರು ಪೂರೈಕೆಗೆ ಹೆಚ್ಚು ಗಮನಹರಿಸಲಾಗುತ್ತಿದೆ ಗ್ರಾಪಂ ಪಿಡಿಒ ಈಶ್ವರಪ್ಪ ತಿಳಿಸಿದರು.
ಸಮೀಪದ ಪಿ.ಮಹದೇವಪುರ ಗ್ರಾಮದ ಹೊರವಲಯದ ನೀರಿನ ತೊಟ್ಟಿಗಳನ್ನು ಶುಕ್ರವಾರ ಸ್ವಚ್ಛಗೊಳಿಸಿ, ಕ್ಲೋರಿನೇಷನ್ ಮಾಡುವ ಸಂದರ್ಭ ಮಾತನಾಡಿದರು.
ಆರ್‌ಒ ದುರಸ್ತಿ, ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಖುದ್ದು ಸ್ಥಳಕ್ಕೆ ಭೇಟಿ ನೀಡಿ ನೀರಿನ ತೊಟ್ಟೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದರು.
ಆಡಳಿತ ವೈದ್ಯಾಧಿಕಾರಿ ಡಾ.ರಾಕೇಶ್, ಗ್ರಾಪಂ ಅಧ್ಯಕ್ಷೆ ಕವಿತಾ, ಉಪಾಧ್ಯಕ್ಷ ಓಬಳೇಶ, ಸದಸ್ಯ ವೀರೇಶ, ಎನ್.ಮಧುಕುಮಾರ, ಡಾ.ರಾಕೇಶ್, ನರಸಿಂಹಪ್ಪ, ನಾಗೇಂದ್ರಪ್ಪ ಇದ್ದರು.