ಮಳೆ, ಬೆಳೆಗೆ ಪರಿಸರವೇ ಆಧಾರ

CLK PANCHAYITI 05
Published on

ಚಳ್ಳಕೆರೆ: ಗಿಡ ಮರಗಳಿದ್ದಲ್ಲಿ ಉತ್ತಮ ಮಳೆ, ಬೆಳೆಗೆ ಆಧಾರ ಇರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಪರಿಸರ ಕಾಳಜಿ ವಹಿಸಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ಜೆ.ತಿಪ್ಪೇಸ್ವಾಮಿ ಹೇಳಿದರು.

ತಾಲೂಕಿನ ಪಗಡಲಬಂಡೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿದರು.

ಹಸಿರೀಕರಣದಿಂದಾಗುವ ಅನುಕೂಲಗಳ ಬಗ್ಗೆ ಜನ ಜಾಗೃತಿ ಮೂಡಿಸುವ ಕೆಲಸವಾಗಬೇಕು. ರೈತರು ಕೃಷಿ ಚಟುವಟಿಕೆಗಳ ಜತೆಗೆ ಜಮೀನಿನ ಬದುವಿನಲ್ಲಿ ಸಸಿ ನೆಡುವ ಮೂಲಕ ಹಸಿರು ಪರಿಸರಕ್ಕೆ ನೆರವಾಗಬೇಕು ಎಂದು ಹೇಳಿದರು.

ತಪಸ್ ಫೌಂಡೇಷನ್‌ನ ಬೂದಿಹಳ್ಳಿ ರಾಜು, ಗ್ರಾಮಸ್ಥರಾದ ಅಂಗಡಿ ರಾಜಣ್ಣ, ರಾಮದಾಸ್, ಕೆ.ವಿ.ವೀರೇಂದ್ರ, ಪಂಚಾಯಿತಿ ಸಿಬ್ಬಂದಿ ಟಿ.ದೇವರಾಜ್, ಜಿ.ಸಿದ್ದೇಶ್, ವೀರೇಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net