ಅಂಚೆ ಇಲಾಖೆ ಸಿಬ್ಬಂದಿ ಪ್ರತಿಭಟನೆ

CLK POST 09
Published on

ಚಳ್ಳಕೆರೆ: ರಾಷ್ಟ್ರವ್ಯಾಪಿ ಬುಧವಾರ ನಡೆದ ಮುಷ್ಕರದ ಬೆಂಬಲಿಸಿ ನಗರದ ಅಂಚೆ ಇಲಾಖೆ ಸಿಬ್ಬಂದಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಹಳೇ ಪಿಂಚಣಿ ಯೋಜನೆ ಜಾರಿ ಮಾಡಿ ಎನ್‌ಇಎಸ್ ಯೋಜನೆ ರದ್ದುಪಡಿಸಬೇಕು. ಕನಿಷ್ಠ 21 ಸಾವಿರ ರೂ. ವೇತನ ನೀಡಬೇಕು. ಇಲಾಖೆಯಲ್ಲಿ ಖಾಸಗೀಕರಣ ನಿಲ್ಲಿಸಬೇಕು. ವಾರದ ಐದು ದಿನಗಳು ಕೆಲಸದ ದಿನಗಳೆಂದು ಘೋಷಿಸಬೇಕು. ಇಡಿಎಸ್ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂದು ಆಗ್ರಹಿಸಿದರು.

ಇಲಾಖೆ ಸಂಘಟನೆಯ ತಿಮ್ಮರೆಡ್ಡಿ, ಮೈಲನಹಳ್ಳಿ ನಾಗರಾಜ್ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net