ಶಿರಸ್ತ್ರಾಣ ಧರಿಸಿ ಪ್ರಾಣ ರಕ್ಷಿಸಿಕೊಳ್ಳಲು ಮನವಿ

CLK POLICE 03
Published on

ಚಳ್ಳಕೆರೆ: ಬೈಕ್ ಚಲಾಯಿಸುವ ಮೊದಲು ಹೆಲ್ಮೆಟ್ ಧರಿಸುವುದನ್ನು ಮರೆಯಬೇಡಿ ಎಂದು ಪೊಲೀಸ್ ಉಪ ಅಧೀಕ್ಷಕ ರೋಷನ್ ಜಮೀರ್ ಹೇಳಿದರು.

ರಸ್ತೆ ನಿಯಮ ಪಾಲನೆ, ಕಡ್ಡಾಯ ಹೆಲ್ಮೆಟ್ ಧಾರಣೆ, ವಾಹನ ಚಾಲನಾ ಪರವಾನಗಿ, ವಿಮಾ ಚೀಟಿ ಸದಾ ವಾಹನದಲ್ಲಿಯೇ ಇರುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಗರದಲ್ಲಿ ಮಂಗಳವಾರ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಹೆಲ್ಮೆಟ್ ಜಾಗೃತಿ ಬೈಕ್ ರ‌್ಯಾಲಿಗೆ ಚಾಲನೆ ನೀಡಿ ಮಾತನಾಡಿದರು.

ವೃತ್ತ ನಿರೀಕ್ಷಕ ಈ. ಆನಂದ್, ಪೊಲೀಸ್ ಉಪನಿರೀಕ್ಷಕ ಎಂ.ಡಿ. ನೂರ್ ಅಹಮದ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net