ಸಿಬ್ಬಂದಿ, ಗ್ರಾಹಕರ ಸಹಕಾರದಿಂದ ಅಭಿವೃದ್ಧಿ, ಆತ್ಮಶಕ್ತಿ ತೊಕ್ಕೊಟ್ಟು ಶಾಖೆ ಸಭೆಯಲ್ಲಿ ಚಿತ್ತರಂಜನ್ ಬೋಳಾರ್ ಅಭಿಮತ

athmashakthi
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ತೊಕ್ಕೊಟ್ಟು ಶಾಖೆ ಗ್ರಾಹಕರ ಸಭೆಯನ್ನು ಸಂಘದ ಸದಸ್ಯರಾದ ಕೆ.ರಘುಚಂದ್ರ ಬಳ್ಳಾಲ್, ಪಿ.ಸಂಜೀವ ಶೆಟ್ಟಿ ಮತ್ತು ಚಂದ್ರಶೇಖರ್ ಉದ್ಘಾಟಿಸಿದರು. ಅಧ್ಯಕ್ಷ ಚಿತ್ತರಂಜನ್ ಬೋಳಾರ್, ಸಂಘದ ಉಪಾಧ್ಯಕ್ಷ ನೇಮಿರಾಜ್ ಪಿ., ನಿರ್ದೇಶಕರಾದ ಆನಂದ ಎಸ್.ಕೊಂಡಾಣ, ದಿವಾಕರ್ ಬಿ.ಪಿ., ಉಮಾವತಿ, ಸಿಇಒ ಸೌಮ್ಯಾ ವಿಜಯ್ ಇದ್ದರು.
Published on

ಮಂಗಳೂರು: ಆತ್ಮಶಕ್ತಿ ವಿವಿಧೋದ್ಧೇಶ ಸಹಕಾರಿ ಸಂಘದ ತೊಕ್ಕೊಟ್ಟು ಶಾಖೆಯ ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ ಗ್ರಾಹಕರ ಸಭೆ ಜರಗಿತು. ಸಂಘದ ಸದಸ್ಯರಾದ ಕೆ.ರಘುಚಂದ್ರ ಬಳ್ಳಾಲ್, ಪಿ.ಸಂಜೀವ ಶೆಟ್ಟಿ ಮತ್ತು ಚಂದ್ರಶೇಖರ್ ಕಾರ್ಯಕ್ರಮ ಉದ್ಘಾಟಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಮಾತನಾಡಿ, ಸಿಬ್ಬಂದಿ ವರ್ಗ ಹಾಗೂ ಗ್ರಾಹಕರ ಸಹಕಾರದಿಂದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಶಾಖೆಗಳನ್ನು ತೆರೆದು ಗ್ರಾಹಕರಿಗೆ ಉತ್ತಮ ರೀತಿಯ ಸೇವೆ ನೀಡಲಾಗುವುದು. ಸಂಘದ ಪ್ರತಿ ಶಾಖೆಗಳಲ್ಲೂ ವೈದ್ಯಕೀಯ ಉಚಿತ ಶಿಬಿರ ಆಯೋಜಿಸುತ್ತಿದ್ದು, ಮುಂಬರುವ ದಿನಗಳಲ್ಲಿ ತೊಕ್ಕೊಟ್ಟು ಶಾಖೆಯಲ್ಲೂ ಉಚಿತ ವೈದ್ಯಕೀಯ ಶಿಬಿರ ಆಯೋಜಿಸಲಾಗುವುದು ಎಂದರು.

ಸಂಘದ ಉಪಾಧ್ಯಕ್ಷ ನೇಮಿರಾಜ್ ಪಿ., ನಿರ್ದೇಶಕರಾದ ಆನಂದ ಎಸ್.ಕೊಂಡಾಣ, ದಿವಾಕರ್ ಬಿ.ಪಿ., ಉಮಾವತಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯಾ ವಿಜಯ್ ಉಪಸ್ಥಿತರಿದ್ದರು.

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಕೆ.ಸಿ ರೋಡ್ ಶಾಖೆಯ ಹಿರಿಯ ಶಾಖಾಧಿಕಾರಿ ಹರಿಣಾಕ್ಷಿ ಪ್ರಶಾಂತ್ ಸ್ವಾಗತಿಸಿ, ರತಿಕಾ ವಂದಿಸಿದರು. ತೊಕ್ಕೊಟ್ಟು ಶಾಖೆ ಪ್ರಭಾರ ಶಾಖಾಧಿಕಾರಿ ಭವ್ಯಾ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net