ಗರ್ಭದಲ್ಲಿದ್ದ ಗಡ್ಡೆ ಹೊರತೆಗೆದ ಚಿಟಗುಪ್ಪಿ ಆಸ್ಪತ್ರೆ ವೈದ್ಯರು

h16-chitaguppi
Published on

ಹುಬ್ಬಳ್ಳಿ: ಮೂವರು ಮಹಿಳೆಯರ ಗರ್ಭದಲ್ಲಿದ್ದ ಗಡ್ಡೆಯನ್ನು ಹೊರತೆಗೆಯುವಲ್ಲಿ ಇಲ್ಲಿಯ ಚಿಟಗುಪ್ಪಿ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ.

ಹುಬ್ಬಳ್ಳಿಯ ರೇಣುಕಾ, ಶಿರೂರ ಗ್ರಾಮದ ಫಾತಿಮಾ, 53 ವರ್ಷದ ಮಹಿಳೆಯರಲ್ಲಿ ಕ್ರಮವಾಗಿ 2.5 ಕೆಜಿ, 1.8, 1.2 ಕೆಜಿ ಗಡ್ಡೆ ಇತ್ತು. ತಪಾಸಣೆ ನಡೆಸಿದ್ದ ಚಿಟಗುಪ್ಪಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶ್ರೀಧರ ದಂಡಪ್ಪನವರ ಅವರು, ಶಸ್ತ್ರ ಚಿಕಿತ್ಸೆ ನೆರವೇರಿಸುವ ಮೂಲಕ ಗಡ್ಡೆಯನ್ನು ಹೊರ ತೆಗೆದಿದ್ದಾರೆ. ಡಾ. ಚನ್ನಬಸಪ್ಪ ಕೋರಿ, ಡಾ. ಸಂಜೀವ, ವೈದ್ಯಕೀಯ ಸಿಬ್ಬಂದಿ ಶಸ್ತ್ರಚಿಕಿತ್ಸಾ ತಂಡದಲ್ಲಿದ್ದರು. ‘ಶಸ್ತ್ರ ಚಿಕಿತ್ಸೆ ಪಡೆದಿರುವ ಮೂವರು ಮಹಿಳೆಯರು ಆರೋಗ್ಯದಿಂದ ಇದ್ದಾರೆ’ ಎಂದು ಡಾ. ಶ್ರೀಧರ ದಂಡಪ್ಪನವರ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net