

ಕೋಟ: ಚಿತ್ರಪಾಡಿ-ಸಾಲಿಗ್ರಾಮ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ದೇವಿಯ ಪ್ರತಿಷ್ಠಾಪನಾ ವರ್ಧಂತಿ ಮಂಗಳವಾರ ಮತ್ತು ಬುಧವಾರ ಸಂಪನ್ನಗೊಂಡಿತು.
ದೇಗುಲದ ತಂತ್ರಿ ಕೃಷ್ಣ ಸೋಮಯಾಜಿ ನೇತೃತ್ವದಲ್ಲಿ ಪ್ರಧಾನ ಅರ್ಚಕ ಸುಧೀರ್ ಐತಾಳ್ ಸಮ್ಮುಖದಲ್ಲಿ ಧಾರ್ಮಿಕ ವಿಧಿವಿಧಾನಗಳು ಜರುಗಿದವು. ದೇಗುಲ ಅಧ್ಯಕ್ಷ ಆನಂದ್ ಗಾಣಿಗ ದಂಪತಿ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಂಗಳವಾರ ಶ್ರೀ ಮಾರಿಯಮ್ಮ ಮಹಿಳಾ ಭಜನಾ ಮಂಡಳಿ, ಚಿತ್ರಪಾಡಿ ಶ್ರೀ ನಂದಿಕೇಶ್ವರ ಭಜನಾ ಸಂಘ, ಶ್ರೀ ಮಾರಿಯಮ್ಮ ಮಹಿಳಾ ಭಜನಾ ಮಂಡಳಿಯಿಂದ ಕುಣಿತ ಭಜನೆ ನಡೆಯಿತು.
ರಾತ್ರಿ ಅಮೃತಾ ಉಪಾಧ್ಯಾ ಅವರಿಂದ ಈಶಾಲಾಸ್ಯ ನೃತ್ಯ ತಂಡ ಚಿತ್ರಪಾಡಿ ಅವರಿಂದ ನೃತ್ಯ ಸಿಂಚನ, ಪಂಚದೀವಿಟಿಕೆ ದೃವಾಂಶ ಸಾರುವ ಕಥಾನಕ ತ್ರಿನೇತ್ರ ಕಲಾತಂಡ ಉಪ್ಪಾಡಿ ನಾಟಕ ಪ್ರದರ್ಶನ, ಬುಧವಾರ ವಿಪ್ರ ಮಹಿಳಾ ಸಾಲಿಗ್ರಾಮ ವಲಯ ಭಜನಾ ಕಾರ್ಯಕ್ರಮ , ರಾತ್ರಿ ಶ್ರೀ ಅಮೃತೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯಿಂದ ಯಕ್ಷಗಾನ ಬಯಲಾಟ ನಾಗನಂದನೆ ಪ್ರದರ್ಶನಗೊಂಡಿತು. ದೇಗುಲ ಗೌರವಾಧ್ಯಕ್ಷ ಕೃಷ್ಣಮೂರ್ತಿ ಭಟ್, ಕಾರ್ಯದರ್ಶಿ ನಾಗೇಂದ್ರ ಆಚಾರ್, ಕೋಶಾಧಿಕಾರಿ ಉದಯ್ ಗಾಣಿಗ, ಸಮಿತಿ ಪದಾಧಿಕಾರಿಗಳು ಮತ್ತಿತರರು ಇದ್ದರು.