

ಹೊಸದುರ್ಗ: ತಾಲೂಕಿನ ಲಕ್ಕಿಹಳ್ಳಿ ಗ್ರಾಮಸ್ಥರು ಭಾನುವಾರ ಚಿತ್ರದುರ್ಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಟಿ. ರುಮೂರ್ತಿ ಅವರನ್ನು ಭೇಟಿಯಾಗಿ ಜನ ಹಾಗೂ ಜಾನುವಾರುಗಳಿಗೆ ವಾಣಿವಿಲಾಸ ಸಾಗರದ ಹಿನ್ನೀರಿನಿಂದ ನೀರು ಪೂರೈಸುವಂತೆ ಮನವಿ ಸಲ್ಲಿಸಿದರು.
ಸಚಿವರ ಭೇಟಿಗೆ ಮುನ್ನ ಚಿತ್ರದುರ್ಗದ ಜಿಪಂ ಕಚೇರಿ ಆವರಣದಲ್ಲಿ ನೂರಕ್ಕೂ ಹೆಚ್ಚು ಲಕ್ಕಿಹಳ್ಳಿ ಗ್ರಾಮಸ್ಥರು ಹೊಳಲ್ಕೆರೆೆ ಶಾಸಕ ಎಂ. ಚಂದ್ರಪ್ಪ, ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಅವರನ್ನು ಭೇಟಿ ವಾಡಿ ಅವರಿಗೂ ಗ್ರಾಮಕ್ಕೆ ನೀರು ಒದಗಿಸಲು ಸಹಕಾರ ನೀಡುವಂತೆ ಮನವಿ ಪತ್ರ ಸಲ್ಲಿಸಿದರು. ಗ್ರಾಮಕ್ಕೆ ಸಮರ್ಪಕ ಕುಡಿಯುವ ನೀರಿನ ಸೌಲಭ್ಯವಿಲ್ಲದೆ ತೀವ್ರ ತೊಂದರೆಯಾಗಿದೆ. ಬರಗಾಲ ಕಾರಣ ನೀರಿನ ಸಮಸ್ಯೆ ಬಿಗಡಾಯಿಸಿದೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ವಿವಿಸಾಗರದ ಹಿನ್ನೀರಿನಿಂದ ಹೊಳಲ್ಕೆರೆೆ ತಾಲೂಕಿಗೆ ಕುಡಿಯುವ ನೀರು ತೆಗೆದುಕೊಂಡು ಹೋಗಿರುವ ಪೈಪ್‌ಲೈನ್ ಲಕ್ಕಿಹಳ್ಳಿ ಮೂಲಕ ಹಾದು ಹೋಗಿದೆ. ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಪೈಪ್‌ಲೈನ್ ನಿರ್ಮಿಸಿದೆ. ಪೈಪ್‌ಲೈನ್‌ಗೆ ನಳ ಅಳವಡಿಸಿದರೆ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತದೆ ಎಂದು ತಿಳಿಸಿದ್ದಾರೆ.
ಗ್ರಾಮಕ್ಕೆ ಸಮೀಪದ ವಿವಿಸಾಗರದ ಹಿನ್ನೀರಿನಿಂದ ನೀರು ಪೂರೈಕೆ ಯೋಜನೆ ಅನುಷ್ಠಾನಗೊಳಿಸಿದರೆ ಗ್ರಾಮಸ್ಥರು, ಜಾನುವಾರುಗಳಿಗೆ ಶಾಶ್ವತ ನೀರಿನ ಸೌಲಭ್ಯ ಕಲ್ಪಿಸಿದಂತಾಗುತ್ತದೆ. ಇದನ್ನು ಸಚಿವರು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಗ್ರಾಮಸ್ಥರ ಮನವಿಗೆ ಎಂಎಲ್‌ಸಿ ಕೆ.ಎಸ್. ನವೀನ್ ಅವರು ಸಕರಾತ್ಮಕವಾಗಿ ಸ್ಪಂದಿಸಿದ್ದಲ್ಲದೆ, ಈ ಕುರಿತು ಸಚಿವರನ್ನು ಭೇಟಿ ಮಾಡಿ ಖುದ್ದಾಗಿ ನಾನೇ ಅಧಿಕಾರಿಗಳೊಂದಿಗೆ ಈ ಕುರಿತು ಭೇಟಿ ನೀಡಿ, ಸದ್ಯದಲ್ಲೇ ಸಮಸ್ಯೆ ಪರಿಹರಿಸುವ ಕೆಲಸವನ್ನು ವಾಡುತ್ತೇವೆ ಎಂದು ಭರವಸೆ ನೀಡಿದರು. ಗ್ರಾಮ ಪಂಚಾಯಿತಿ ವಾಜಿ ಸದಸ್ಯ ದಾರಾವಾದಪ್ಪ, ಕೆಂಚಪ್ಪ, ಪವಿತ್ರಮ್ಮ, ವೇದಮೂರ್ತಿ, ಮಹೇಶ್ವರಪ್ಪ, ಕರಿಯಪ್ಪ, ಪ್ರಸನ್ನಕುವಾರ, ಗುಂಡಪ್ಪ, ಸಿದ್ದೇಶ ಇತರರು ಇದ್ದರು.