ಆರ್‌ಒಗಳ ನಿರ್ವಹಣೆಗೆ ವಾಟರ್ ಪ್ಲೋಮೀಟರ್

ಆರ್‌ಒ ಪ್ಲಾಂಟ್ ಸಾಂಕೇತಿಕ ಚಿತ್ರ
ಆರ್‌ಒ ಪ್ಲಾಂಟ್ ಸಾಂಕೇತಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಪ್ರಗತಿಯಲ್ಲಿರುವ ಎಂವಿಎಸ್, ಜೆಜೆಎಂ ಕಾಮಗಾರಿ
  • ಮುಂದಿನ ಬೇಸಿಗೆಯೊಳಗೆ ಪೂರ್ಣಗೊಳಿಸುವ ಗುರಿ
  • ನೀರ್‌ಲ್ಯಾಬ್ ಮೂಲಕ ನೇರ ಉಸ್ತುವಾರಿ
ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ
ಬರಗಾಲದ ಸಂಕಷ್ಟ ಸಮಯದಲ್ಲಿ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ನೀಗಿಸಲು ಹೊಸ ಕೊಳವೆ ಬಾವಿ ಕೊರೆಸುವಿಕೆ, ಬಾಡಿಗೆ ಪಡೆದ ಖಾಸಗಿ ಕೊಳವೆ ಬಾವಿ ಹಾಗೂ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದ್ದರೂ, ನೀರಿನ ತೊಂದರೆ ಕುರಿತಂತೆ ದೂರುಗಳಿವೆ.
ಈ ಹಿನ್ನೆಲೆಯಲ್ಲಿ ಸಮರ್ಪಕ ನೀರು ಪೂರೈಕೆಗೆ ಅಡಚಣೆಯಾಗದಂತೆ ಜಲಜೀವನ್ ಮಿಷನ್ ಹಾಗೂ ಬಹುಗ್ರಾಮ ಕುಡಿವ ನೀರು ಯೋಜನೆ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಜಿಪಂ, ಟೆಕ್ನಾಲಜಿ ಬಳಸಿಕೊಂಡÀ ನೀರ್‌ಲ್ಯಾಬ್ ಹೆಸರಿನ ಪ್ರಾಜೆಕ್ಟ್ ಮ್ಯಾನೇಜಿಂಗ್ ಯೂನಿಟ್ ಮೂಲಕ ಮೇಲುಸ್ತುವಾರಿ ಮಾಡುತ್ತಿದೆ.
ಕಳೆದ ಆಗಸ್ಟ್೧೫ರಂದು ಅಽಕೃತ ಚಾಲನೆ ಪಡೆದಿರುವ ಈ ಯೂನಿಟ್ ಕಳೆದ ಒಂದು ವರ್ಷದಿಂದ ಕರ‍್ಯಾರಂಭ ಮಾಡಿದೆ. ಈಗ ಮತ್ತೆ ಟೆಕ್ನಾಲಜಿ ಉಪಯೋಗಿಸಿಕೊಂಡು ಜಿಲ್ಲೆಯಲ್ಲಿರುವ ಅಂದಾಜು ೧೧೫೦ ಶುದ್ಧ ಕುಡಿವ ನೀರಿನ ಘಟಕ ಗಳ ಪೈಕಿ ಕರ‍್ಯಾ ಚರಣೆಯಲ್ಲಿರುವ ೯೦೦ ಆರ್‌ಒಗಳಿಗೆ ವಾಟರ್ ಫ್ಲೋಮೀಟರ್ ಅಳವಡಿಸಲು ತೀರ್ಮಾನಿಸಿದೆ.
ನೀರು ಪೂರೈಕೆಯ ದೊಡ್ಡದೊಡ್ಡ ಸಂಸ್ಕರಣಾ ಘಟಕಗಳು, ಪಂಪ್ ಸ್ಟೇಷನ್ಸ್, ಪೂರೈಕೆ ಕೊಳವೆ ಮಾರ್ಗಗಳಂತಹ ಮೂಲ ಸೌಕರ್ಯ ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಬಳಸುವ ಕಂಪ್ಯೂಟರ್‌ಆಧಾರಿತ ಜಾಲ ಮಾದರಿಯಲ್ಲೇ ಆರ್‌ಒ ಪ್ಲಾಂಟ್‌ಗಳ ನಿ
ರ್ವಹಣೆಗೆ ಉದ್ದೇಶಿಸಲಾಗಿದೆ. ಆದರೆ, ಘಟಕದ ಆನ್ ಆ್ಯಂಡ್ ಆಫ್ ಕೆಲಸ ನೀರಗಂಟಿಗಳೇ ನಿರ್ವಹಿಸಲಿದ್ದಾರೆ.
ವಾಟರ್ ಪ್ಲೋ ಮೀಟರ್ ಅಳವಡಿಕೆಗೆ ಈ ಮೊದಲು ಕೆಎಂಇಆರ್‌ಸಿಯಿAದ ಅನುದಾನ ಪಡೆಯುವ ಚಿಂತನೆ ಇತ್ತು. ಆದರೆ, ಈಗ ಆಯಾ ಗ್ರಾಪಂಗಳ ಅನುದಾನ ಬಳಸಿ ವಾಟರ್ ಪ್ಲೋ ಮೀಟರ್‌ಗಳನ್ನು ೩ ತಿಂಗಳ ಒಳಗೆ ಅಳವಡಿಸಲಾಗುತ್ತದೆ. ಪ್ರಸ್ತುತ ವಾರ್ಷಿಕವಾಗಿ ಆರ್‌ಒಗಳ ನೀರಿನ ಗುಣಮಟ್ಟ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಆರಂಭದಲ್ಲಿ ಹೆಚ್ಚು ಗಡಸು ನೀರಿರುವ ಆರ್‌ಒ ಗಳಿಗೆ ಆದ್ಯತೆ ಮೇಲೆ ವಾಟರ್ ಪ್ಲೋಮೀಟರ್ ಅಳವಡಿಸಿ ನಿರ್ವಹಿಸಲು ಉದ್ದೇಶಿಸಲಾಗಿದೆ ಹಾಗೂ ಈ ಮೀಟರ್‌ಗಳನ್ನು ಒಎಚ್‌ಟಿಗಳಿಗೂ ಅಳವಡಿಸುವ ಚಿಂತನೆ ಇದೆ.
೨೦೧೯ರಲ್ಲಿ ಜಿಲ್ಲೆಯಲ್ಲಿ ಆರಂಭವಾದ ಜಲಜೀವನ್ ಮಿಷನ್ ಕಾಮಗಾರಿ ೨೦೨೫ರೊಳಗೆ ಸಂಪೂರ್ಣವಾಗಬೇಕಿತ್ತು. ಕಳೆದ ೫ ವರ್ಷಗಳಲ್ಲಿ ಪೂರ್ಣಗೊಂಡÀ ಜೆಜೆಎಂ ಕಾಮಗಾರಿಗಳ ವೇಗಕ್ಕೆ ಹೋಲಿಸಿದರೆ ನೀರ್‌ಲ್ಯಾಬ್ ಉಸ್ತುವಾರಿಯಲ್ಲಿ ಕಳೆದ ೧ ವರ್ಷದಿಂದ ಕಾಮಗಾರಿಗಳ ಅನುಷ್ಠಾನಕ್ಕೆ ವೇಗ ದೊರಕಿದೆ ಎಂದು ಜಿಪಂ ಮೂಲಗಳು ತಿಳಿಸಿವೆ.
ಜೆಜೆಎಂ ಕಾಮಗಾರಿಗಳು ಹಾಗೂ ಚಾಲ್ತಿಯಲ್ಲಿರುವ ಎಂವಿಎಸ್‌ಗಳ ಅನುಷ್ಠಾನ ಕಾರ್ಯ ಮುಂದಿನ ಬೇಸಿಗೆಯೊಳಗೆ ಪೂರ್ಣ ಗೊಳಿಸುವ ಗುರಿ ಇದೆ. ಮನೆಮನೆಗೆ ನಳ ಸಂಪರ್ಕ, ಪೈಪ್‌ಲೈನ್ ಅಳವಡಿಕೆ ಕರ‍್ಯದಲ್ಲಿ ಪ್ರಗತಿಯಾಗುತ್ತಿದ್ದರೂ, ಈ ಕಾಮಗಾರಿಗಳ ಪರಿಪೂರ್ಣ ಅನುಷ್ಠಾನಕ್ಕೆ ನೀರಿನ ಲಭ್ಯತೆ ಸಮಸ್ಯೆಯಾಗಿದೆ ಎನ್ನುತ್ತಿವೆ ಮೂಲಗಳು.
ಚಾಲ್ತಿಯಲ್ಲಿರುವ ಎಂವಿಎಸ್‌ಗಳು
ಚಳ್ಳಕೆರೆ, ಮೊಳಕಾಲ್ಮೂರು, ಚಿತ್ರದುರ್ಗ ತಾಲೂಕು ತುರುವನೂರು ಹೋಬಳಿ ಗ್ರಾಮ ಒಳಗೊಂಡಿರುವ, ತುಂಗಾಭದ್ರಾ ಜಲಾಶಯದಿಂದ ನೀರು ಪೂರೈಸುವ ಪಾವಗಡ ಸ್ಕೀಂ. ಹಿರಿಯೂರು ತಾಲೂಕಿನ ಐಮಂಗಲ ಫೇಸ್ ೧. ಐಮಂಗಲ ಫೇಸ್ ೨. ಜವಗೊಂಡನಹಳ್ಳಿ ಮತ್ತು ೩೮ ಗ್ರಾಮಗಳು.
ಹರ್ತಿಕೋಟೆ ಮತ್ತು ೩೭ ಗ್ರಾಮಗಳು. ಹೊಸದುರ್ಗ ಫೇಸ್ ೧ಎ, ಹೊಸದುರ್ಗ ೧ಬಿ. ಹೊಸದುರ್ಗ ಫೇಸ್ ೨. ಹೊಳಲ್ಕೆರೆ ಪಟ್ಟಣ ಮತ್ತು ೨೧೫ ಗ್ರಾಮಗಳು ಹಾಗೂ ಈ ಎಂವಿಎಸ್‌ಗಳಲ್ಲಿ ಕೈ ಬಿಟ್ಟಿರುವ ಚಿತ್ರದುರ್ಗ ಮತ್ತು ಹಿರಿಯೂರು ತಾಲೂಕುಗಳ ೩೦೦ ಗ್ರಾಮ ಗಳಿಗೆ ನೀರು ಪೂರೈಸುವ ಹೊಸದುರ್ಗ ಹೆಸರಿನ ಎಂವಿಎಸ್ ಸ್ಕೀಂಗಳು ಚಾಲ್ತಿಯಲ್ಲಿವೆ. ಪಾವಗಡ ಸ್ಕೀಂ ಪೂರ್ಣಗೊಂಡಿದ್ದರೂ, ಅದಿನ್ನೂ ಸಂಬAಽಸಿದ ಇಲಾಖೆಗೆ ಹಸ್ತಾಂತರವಾಗಿಲ್ಲ.
ಸಮಸ್ಯಾತ್ಮಕ ಗ್ರಾಮಗಳು
ಬರಗಾಲ ಹಿನ್ನೆಲೆಯಲ್ಲಿ ಜಿಲ್ಲೆಯ ೧೮೯ ಗ್ರಾಪಂಗಳ ಪೈಕಿ ೯೨ ಗ್ರಾಪಂಗಳ ವ್ಯಾಪ್ತಿಯ ೨೧೭ ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ಉಲ್ಭಣಿಸಬಹುದೆಂದು ಗುರುತಿಸಲಾಗಿದೆ. ಈ ಪೈಕಿ ಪ್ರಸ್ತುತ ೨೧ ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳು ಹಾಗೂ ೧೯ ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಆಗುತ್ತಿದೆ. ಮಳೆ ಬಾರದಿದ್ದರೆ ಇನ್ನಷ್ಟು ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ಬಿಗಾಡಿಸಲಿದೆ.
"

ವಾಟರ್‌ಪ್ಲೋ ಮೀಟರ್ ಅಳವಡಿಸುವ ಮೂಲಕ ಆರ್‌ಒಗಳನ್ನು ನಿರ್ವಹಿಸಲು ಉದ್ದೇಶಿಸಲಾಗಿದೆ. ಇದರಿಂದ ಜಿಪಂ ಆವರಣದÀ ನೀರ್‌ಲ್ಯಾಬ್‌ನಲ್ಲಿ ಸಮಸ್ಯೆ ಎದುರಾದ ಆರ್‌ಒಗಳನ್ನು ತಕ್ಷಣ ಗುರುತಿಸಿ ಸರಿಪಡಿಸಲು ಸಾಧ್ಯವಾಗಲಿದೆ. ಈಗಾಗಲೇ ನೀರ್‌ಲ್ಯಾಬ್ ಮೂಲಕ ಜೆಜೆಎಂ, ಎಂವಿಎಸ್ ಕಾಮಗಾರಿಗಳ ನೇರ ಉಸ್ತುವಾರಿ ಮಾಡಲಾಗುತ್ತಿದೆ. ಈ ಲ್ಯಾಬ್ ಮೂಲಕ ಎಸ್‌ಬಿಎಂ ಪ್ರಗತಿಯನ್ನೂ ಪರಿಶೀಲಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net