ಚಿತ್ರದುರ್ಗದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಜಲ ದಿನದ ಕಾರ್ಯಕ್ರಮದಲ್ಲಿ ಡಾ.ಎಸ್.ಎನ್. ಪ್ರದೀಪ್, ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ, ಡಾ.ಕೆ.ಪಿ. ನಾಗಭೂಷಣಶೆಟ್ಟಿ, ಚಳ್ಳಕೆರೆ ರ‍್ರಿಸ್ವಾಮಿ, ಈ. ರುದ್ರಮುನಿ, ಡಾ.ಜಿ.ಪಿ. ರಾಜು, ಆರ್.ಎಸ್. ರಾಜು, ನಾಗಲಿಂಗರೆಡ್ಡಿ, ಎಚ್.ಎಸ್.ಟಿ. ಸ್ವಾಮಿ ಇತರರು ಇದ್ದರು.
ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿಶ್ವ ಜಲ ದಿನ ಕಾರ್ಯಕ್ರಮ
ಚಿತ್ರದುರ್ಗ: ನೀರಿನ ಮಿತಬಳಕೆ ಭವಿಷ್ಯದ ಬದುಕಿಗೆ ಭರವಸೆ ಎಂದು ವೀನಸ್ ಅಕಾಡೆಮಿ ಶೈಕ್ಷಣಿಕ ನಿರ್ದೇಶಕ ಡಾ.ಎಸ್.ಎನ್. ಪ್ರದೀಪ್ ಹೇಳಿದರು.
ಚಿತ್ರದುರ್ಗ ಸೈನ್ಸ್ ಫೌಂಡೇಶನ್ ನಗರದ ಶ್ರೀ ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಂಗಳವಾರ ವಿಶ್ವ ಜಲ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದು ಕುಡಿಯುವ ನೀರಿಗೂ ಹಾಹಾಕಾರ ಹೆಚ್ಚಾಗುತ್ತಿದೆ. ನೀರಿದ್ದರೆ ಮಾತ್ರವೇ ನಮ್ಮೆಲ್ಲರ ಉಳಿವು, ಇಲ್ಲವಾದಲ್ಲಿ ಶಾಶ್ವತ ಅಳಿವು ಶತಸಿದ್ಧ ಎಂದರು.
ಚಿಂತಕ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ ಮಾತನಾಡಿ, ಭೂಮಿ ಮೇಲೆ ಕುಡಿಯುವ ನೀರಿನ ಲಭ್ಯತೆ ಅತ್ಯಂತ ಕಡಿಮೆ ಇದೆ. ಜಾಗ ತಿಕ ತಾಪಮಾನ ಏರಿಕೆಯಿಂದ ನೀರ್ಗಲ್ಲುಗಳು ಕರಗುತ್ತಿವೆ. ಇಂತಹ ಸ್ಥಿತಿಯಲ್ಲಿ ಉಪ್ಪು ನೀರನ್ನು ಶುದ್ಧ ಕುಡಿಯುವ ನೀರನ್ನಾಗಿ ಮಾಡುವುದು ಸವಾಲಾಗಿದೆ ಎಂದರು.
ಅತಿಯಾಗಿ ಕೊಳವೆ ಬಾವಿ ಕೊರೆಯುವಿಕೆಯಿಂದ ಅಂತರ್ಜಲಕ್ಕೆ ಹೊಡೆತ ಬೀಳುತ್ತಿದೆ. ಜೀವಜಲವನ್ನು ಸಂರಕ್ಷಿಸಬೇಕಿದೆ. ನೀರ ನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಿದೆ ಎಂದರು.
ಪ್ರಾಚಾರ್ಯ ಡಾ.ಕೆ.ಪಿ. ನಾಗಭೂಷಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಚಳ್ಳಕೆರೆ ರ‍್ರಿಸ್ವಾಮಿ, ಈ.ರುದ್ರಮುನಿ, ಡಾ.ಜಿ.ಪಿ. ರಾಜು, ಆರ್.ಎಸ್. ರಾಜು, ನಾಗಲಿಂಗರೆಡ್ಡಿ ಇದ್ದರು. ಫೌಂಡೇಷನ್ ಕಾರ್ಯದರ್ಶಿ ಎಚ್.ಎಸ್.ಟಿ. ಸ್ವಾಮಿ ಸ್ವಾಗತಿಸಿ, ಸ್ನೇಹ ವಂದಿಸಿದರು. ಭಾರ್ಗವಿ ನಿರೂಪಿಸಿದರು.