ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಅ.೨೩ರಂದು ಮತದಾನ

ನಗರದ ಸರ್ಕಾರಿ ಕಾಲೇಜಿನಲ್ಲಿ ಮಸ್ಟರಿಂಗ್
ಚಿತ್ರದುರ್ಗದಲ್ಲಿ ಎಂಎಲ್‌ಸಿ ಎಲೆಕ್ಷನ್‌ಗೆ ನಗರದ ನಡೆದ ಸರ್ಕಾರಿ ಕಲಾ ಕಾಲೇಜಿನ ಮಸ್ಟರಿಂಗ್ ಸೆಂಟರ್‌ಗೆ ಡಿಸಿ ಎಸ್.ರಮ್ಯಾ ಭೇಟಿ ನೀಡಿ ಪರಿಶೀಲಿಸಿದರು. ಎಡಿಸಿ ಬಿ.ಟಿ. ಕುಮಾರಸ್ವಾಮಿ ಇತರ ಅಽಕಾರಿಗಳಿದ್ದರು.
ಚಿತ್ರದುರ್ಗದಲ್ಲಿ ಎಂಎಲ್‌ಸಿ ಎಲೆಕ್ಷನ್‌ಗೆ ನಗರದ ನಡೆದ ಸರ್ಕಾರಿ ಕಲಾ ಕಾಲೇಜಿನ ಮಸ್ಟರಿಂಗ್ ಸೆಂಟರ್‌ಗೆ ಡಿಸಿ ಎಸ್.ರಮ್ಯಾ ಭೇಟಿ ನೀಡಿ ಪರಿಶೀಲಿಸಿದರು. ಎಡಿಸಿ ಬಿ.ಟಿ. ಕುಮಾರಸ್ವಾಮಿ ಇತರ ಅಽಕಾರಿಗಳಿದ್ದರು.
Published on: 

ಚಿತ್ರದುರ್ಗ: ವಿಧಾನಪರಿಷತ್ ಆಗ್ನೇಯ ಪದವೀಧರರ ಕ್ಷೇತ್ರ ದ್ವೆÊವಾರ್ಷಿಕ ಚುನಾವಣೆಗೆ ಅ.೨೩ರಂದು ಬೆಳಗ್ಗೆ ೮ರಿಂದ ಸಂಜೆ ೪ರವರೆಗೆ ಮತ ದಾನ ನಡೆಯಲಿದೆ. ಗುರುವಾರ ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಮಸ್ಟರಿಂಗ್ ನಡೆಯಿತು.

ಇದೇ ಮೊದಲ ಬಾರಿಗೆ ಜಿಲ್ಲಾಕೇಂದ್ರದಲ್ಲಿ ಮಸ್ಟರಿಂಗ್, ಡಿ ಮಸ್ಟರಿಂಗ್ ನಡೆದಿದ್ದು, ಇದಕ್ಕೂ ಮುನ್ನ ತಾಲೂಕು ಮಟ್ಟದಲ್ಲೇ ನಡೆಯುತ್ತಿತ್ತು.

ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿದ ಡಿಸಿ ಎಸ್. ರಮ್ಯಾ ಮತದಾನ ಪೂರ್ವ ಸಿದ್ಧತೆ ಪರಿಶೀಲನೆ ನಡೆಸಿದರು. ಮೈಕ್ರೋ ಅಬ್ಸರ್ವರ್‌ಗಳು ಕಡ್ಡಾಯವಾಗಿ ಬೆಳಗ್ಗೆ ೬.೩೦ರಿಂದ ೬.೪೫ರೊಳಗೆ ಮತಗಟ್ಟೆಗಳಲ್ಲಿ ಇರಬೇಕು. ಅಲ್ಲಿ ಮತಗಟ್ಟೆ ಅಽಕಾರಿ ಹೊರತುಪಡಿಸಿ ಇತರರಿಗೆ ಮೊಬೈಲ್ ಬಳಸಲು ಅವಕಾಶವಿಲ್ಲ. ನಿಯೋಜಿತ ಅಽಕಾರಿ, ಸಿಬ್ಬಂದಿ ತಂಡವಾಗಿ ಕೆಲಸ ಮಾಡಬೇಕು.

ತರಬೇತಿ ಸಂದರ್ಭದಲ್ಲಿ ಕೊಟ್ಟ ನಿರ್ದೇಶನಗಳು, ಚೆಕ್‌ಲಿಸ್ಟ್ ಸರಿಯಾಗಿ ಅರಿತು ಗೊಂದಲಗಳಿಗೆ ಅವಕಾಶವಿಲ್ಲದಂತೆ ಕೆಲಸ ಮಾಡಬೇಕು. ಮತಗಟ್ಟೆಯಲ್ಲಿ ಗೊಂದಲ, ತಪ್ಪುಗಳಿದ್ದಲ್ಲಿ ನೋಡಲ್ ಅಽಕಾರಿಗಳನ್ನು ಸಂಪರ್ಕಿಸಿ ಬಗೆಹರಿಸಿಕೊಳ್ಳಬೇಕೆಂದರು.

ಮಸ್ಟರಿAಗ್ ಕುರಿತು ಮಾಹಿತಿ ನೀಡಿದ ಎಡಿಸಿ ಬಿ.ಟಿ. ಕುಮಾರಸ್ವಾಮಿ, ಜಿಲ್ಲಾದ್ಯಂತ ೫೫ ಮತಗಟ್ಟೆ ಸ್ಥಾಪಿಸಲಾಗಿದೆ. ಒಂದು ಮತಗಟ್ಟೆಗೆ ಪಿಆರ್‌ಒ, ಎಪಿಆರ್‌ಒ ಹಾಗೂ ಮೂವರು ಪೋಲಿಂಗ್ ಆಫೀಸರ್‌ಗಳು ಸೇರಿದಂತೆ ಸಿಬ್ಬಂದಿ ನಿಯೋಜಿಸಲಾಗಿದೆ. ತುರ್ತು ಸಂದರ್ಭಕ್ಕೆAದು ೧೫ ಹೆಚ್ಚುವರಿ ತಂಡಗಳನ್ನು ಕಾಯ್ದಿರಿಸಲಾಗಿದೆ ಎಂದರು.

ಎಸಿ ಡಾ.ಕೆ.ಜೆ. ಕಾಂತರಾಜ್, ಆಹಾರ ಇಲಾಖೆ ಜೆಡಿ ಸಿದ್ರಾಮ ಮಾರಿಹಾಳ, ಡಿಡಿಪಿಐ ಮಂಜುನಾಥ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಪರಿಶಿಷ್ಟ ವರ್ಗಗಳ ಕಲ್ಯಾಣಾಽಕಾರಿ ದಿವಾಕರ್, ಬಿಸಿಎಂ ಜಿಲ್ಲಾ ಅಽಕಾರಿ ಪುಷ್ಪಲತಾ ಭಾವಿಮಠ, ಚುನಾವಣಾ ತಹಸೀಲ್ದಾರ್ ಬೀಬೀ -Áತೀಮಾ ಮತ್ತಿತರ ಅಽಕಾರಿಗಳು ಇದ್ದರು.

ಬಾಕ್ಸ್

ವೆಬ್ ಕಾಸ್ಟಿಂಗ್

ಪ್ರತಿ ಮತಗಟ್ಟೆಯಲ್ಲೂ ವೆಬ್ ಕಾಸ್ಟಿಂಗ್ ಇರಲಿದೆ. ಬೆಂಗಳೂರಿನ ಚುನಾವಣಾಽಕಾರಿ ಕಚೇರಿಯಿಂದ ಮತದಾನ ಪ್ರಕ್ರಿಯೆ ನೇರ ವೀಕ್ಷಿಸಲು ಇದರಿಂದ ಸಾಧ್ಯವಾಗಲಿದೆ. ಮತಗಟ್ಟೆಗಳಿಗೆ ಮೂಲ ಸೌಕರ್ಯ ಒದಗಿಸಲಾಗಿದೆ ಎಂದು ಜಿಲ್ಲಾಽಕಾರಿ ರಮ್ಯಾ ವಿವರಿಸಿದರು.

ಪ್ರತಿ ಮತಗಟ್ಟೆಗೂ ಕೇಂದ್ರ ಸರ್ಕಾರಿ ನೌಕರರನ್ನು ಮೈಕ್ರೋ ಅಬ್ಸರ್ವರ್‌ಗಳನ್ನಾಗಿ, ಇವರ ನೋಡೆಲ್ ಅಽಕಾರಿಗಳನ್ನಾಗಿ ಲೀಡ್‌ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕರು ಮತ್ತು ಜಿಲ್ಲಾ ಪ.ವರ್ಗಗಳ ಕಲ್ಯಾಣಾಽಕಾರಿಯನ್ನು ನೇಮಿಸಲಾಗಿದೆ ಎಂದರು.

ಬಾಕ್ಸ್

ಸಹಾಯ ಕೇಂದ್ರ

ಮತಗಟ್ಟೆ ವ್ಯಾಪ್ತಿ ೨೦೦ ಮೀಟರ್ ಹೊರಗೆ ಅಭ್ಯರ್ಥಿಗಳ ಸಹಾಯ ಕೇಂದ್ರಗಳಿಗೆ (೧೦/೧೦ ಶಾಮಿಯಾನ, ೧ಟೇಬಲ್, ೨ ಕುರ್ಚಿ)ಅವಕಾಶವಿದೆ. ೧೦೦ ಮೀಟರ್ ಅಂತರದಲ್ಲಿ ಮತದಾರರ ನೆರವಿಗಾಗಿ ಬಿಎಲ್‌ಒಗಳಿರುವ ಸಹಾಯ ಕೇಂದ್ರ ಇರಲಿದೆ. ಈ ಬಾರಿ ವಿಶೇಷ ವಾಗಿ ಮತದಾರರಿಗೆ ಮತದಾರರ ಚೀಟಿ ವಿತರಿಸಲಾಗಿದೆ. ಮತಗಟ್ಟೆ ವಿವರ, ಸರಣಿ ಸಂಖ್ಯೆ ಮತ್ತು ಮತಗಟ್ಟೆ ಲೊಕೇಶನ್ ಇದರಲ್ಲಿರಲಿದೆ. ಮತ ಚೀಟಿ ತಲುಪದೇ ಇರುವಂಥವರು ಈ ಕೇಂದ್ರಗಳಲ್ಲಿ ಕಲೆಕ್ಟ್ ಮಾಡಿಕೊಳ್ಳಬಹುದಾಗಿದೆ.

ಇಲ್ಲಿರುವ ಸಹಾಯ ಕೇಂದ್ರದ ಅಽಕಾರಿಗಳ ವಶಕ್ಕೆ ಮತದಾರರು ತಮ್ಮ ಮೊಬೈಲ್ ಮತ್ತಿತರ ಎಲೆಕ್ಟಾçನಿಕ್ ಸಾಧನಗಳು, ಪೆನ್ ಮತ್ತಿತರ ವಸ್ತು ಒಪ್ಪಿಸಬೇಕು. ಮತಗಟ್ಟೆಯೊಳಗೆ ಯಾವುದೇ ವಸ್ತು ತೆಗೆದುಕೊಂಡು ಹೋಗುವಂತಿಲ್ಲ. ಆಯೋಗ ನೀಡಿರುವ ವಿಶೇಷ ನೇರಳೆ ಬಣ್ಣದ ಪೆನ್ ಬಳಸಿ ಮತ ಚಲಾಯಿಸಬೇಕಾಗುತ್ತದೆ. ಮತದಾನ ನಂತರ ತಮ್ಮ ವಸ್ತುಗಳನ್ನು ಅಽಕಾರಿಗಳಿಂದ ಮರಳಿ ಪಡೆಯಬೇಕು.

ಬೆಂಗಳೂರಲ್ಲಿ ಭದ್ರತಾ ಕೊಠಡಿ

ಮತದಾನ ಸಾಮಗ್ರಿಗಳೊಂದಿಗೆ ಅಽಕಾರಿ, ಸಿಬ್ಬಂದಿ ಮತಗಟ್ಟೆಗೆ ತೆರಳಲು ೧೦ ರೂಟ್ ಗುರುತಿಸಲಾಗಿದೆ. ೮ ರೂಟ್‌ಗಳಿಗೆ ಕೆಎಸ್‌ಆರ್‌ಟಿಸಿ ಬಸ್ ಹಾಗೂ ೨ ರೂಟ್‌ಗಳಿಗೆ ಟ್ರ‍್ಯಾಕ್ಸ್ಗಳನ್ನು ನಿಯೋಜಿಸಲಾಗಿದೆ. ಮತದಾನದ ನಂತರ, ಎಲ್ಲ ಅಽಕಾರಿ, ಸಿಬ್ಬಂದಿ ಅದೇ ವಾಹನಗಳಲ್ಲಿ ಡಿ-ಮಸ್ಟರಿಂಗ್ ಕೇಂದ್ರಕ್ಕೆ ಆಗಮಿಸಲಿದ್ದಾರೆ. ಅವರಿಂದ ಬ್ಯಾಲೆಟ್ ಬಾಕ್ಸ್ ಹಾಗೂ ಇತರ ದಾಖಲೆಗಳನ್ನು ಕಲೆಕ್ಟ್ ಮಾಡಿದ ನಂತರ, ಎಸಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ನೊAದಿಗೆ ಕಂಟೇನರ್‌ನಲ್ಲಿ ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನ ಭದ್ರತಾ ಕೊಠಡಿಗೆ ತಲುಪಿಸಲಾಗುವುದೆಂದು ಕುಮಾರಸ್ವಾಮಿ ತಿಳಿಸಿದರು.

ಇನ್ ವ್ಯಾಲಿಡ್ ಬಗ್ಗೆ ಇರಲಿ ಎಚ್ಚರ|

ಪ್ರಾಶಸ್ತ್ಯ ಆಧರಿಸಿದ ಈ ಮತದಾನ ಪ್ರಕ್ರಿಯೆಯಲ್ಲಿ ೧ ಎಂದು ಬರೆಯದೇ ೨,೩... ಎಂದೆಲ್ಲ ಬರೆದುಕೊಂಡು ಹೋದರೆ ಅಂಥ ಮತ ಇನ್‌ವ್ಯಾಲಿಡ್ ಆಗಲಿದೆ ಹಾಗೂ ೧ ಎಂದು ಅಂಕೆಯಲ್ಲಿ ಬರೆಯದೇ ಅಕ್ಷರಗಳಲ್ಲಿ ಬರೆಯುವುದು, ರೈಟ್‌ಮಾರ್ಕ್ ಹಾಕುವುದು ಇತ್ಯಾದಿ ಮಾರ್ಕ್ಗಳಿಂದಲೂ ಮತಗಳು ಕುಲಗೆಡಲಿವೆ.

ಬಾಕ್ಸ್..

ಕಣದಲ್ಲಿ ೧೦ ಅಭ್ಯರ್ಥಿಗಳು

ಕಾಂಗ್ರೆಸ್‌ನಿAದ ಶಶಿ ಹುಲಿಕುಂಟೆಮಠ, ಬಿಜೆಪಿಯಿಂದ ಕೆ.ಎಂ. ಸುರೇಶ(ಸೋಮೇಶ್ವರ), ಸರ್ವ ಜನತಾ ಪಕ್ಷದಿಂದ ಜಿ.ಸಿ. ಪಾಟೀಲ್ ಅಭ್ಯರ್ಥಿಗಳಾಗಿದ್ದಾರೆ. ಪಕ್ಷೇತರರಾಗಿ ಕಪನಿಗೌಡ, ಚಿಕ್ಕರಾಜು ಎಸ್. ಯಾದವ್, ಆರ್. ಲಕ್ಷ÷್ಮಯ್ಯ, ಲಕ್ಷಿ÷್ಮÃಕಾಂತ್ ಎಸ್. ಯಾದವ್, ಶಶಿ ಹುಲಿಕಟ್ಟಿ, ಸೈಯದ್ ಅಕಾ ಅಹಮದ್, ಅಡ್ವೋಕೇಟ್ ಬರೀದ್ ಕಣದಲ್ಲಿದ್ದಾರೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಎಷ್ಟು ?

ದಾವಣಗೆರೆ(ಜಗಳೂರು, ಹರಿಹರ, ದಾವಣಗೆರೆ ತಾಲೂಕುಗಳು), ಚಿತ್ರದುರ್ಗ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲೆಗಳು, ೩೩ ವಿಧಾನಸಭಾ ಹಾಗೂ ೫ ಲೋಕಸಭಾ ಕ್ಷೇತ್ರಗಳು, ೩೫ ತಾಲೂಕುಗಳನ್ನು ಒಳಗೊಂಡಿರುವ ಈ ಕ್ಷೇತ್ರದಲ್ಲಿ ೧.೮೫ಲಕ್ಷಕ್ಕೂ ಅಽಕ ಸಂಖ್ಯೆ ಮತದಾರರು ಇದ್ದಾರೆ. ಜಿಲ್ಲೆಯಲ್ಲಿ ೨೫,೫೫೧ ಪುರುಷ ಹಾಗೂ ೧೮,೫೨೨ ಮಹಿಳೆಯರು ಸೇರಿ ೪೪,೦೭೩ ಮತದಾರರು ಅಂತಿಮ ಪಟ್ಟಿಯಲ್ಲಿದ್ದಾರೆ. ಹಿಂದಿನ ಚುನಾವಣೆಯಲ್ಲಿದ್ದ ೨೨ ಮತಗಟ್ಟೆಗಳೊಂದಿಗೆ, ಈ ಬಾರಿ ೩೩ ಹೆಚ್ಚುವರಿ ಸಹಿತ ಜಿಲ್ಲೆಯಲ್ಲಿ ೫೫ ಮತಗಟ್ಟೆಗಳಿವೆ.

ತಾಲೂಕು - ಮತಗಟ್ಟೆಗಳು- ಮತದಾರರು

ಮೊಳಕಾಲ್ಮೂರು - ೪ - ೩೩೮೬

ಚಳ್ಳಕೆರೆ-೧೧-೮೯೦೭,

ಚಿತ್ರದುರ್ಗ- ೧೭-೧೪೧೮೩,

ಹಿರಿಯೂರು-೧೦-೭೬೦೬,

ಹೊಸದುರ್ಗ-೭-೫೪೭೯

ಹೊಳಲ್ಕೆರೆ -೬ - ೪೫೧೨

-ೆÇÃಟೋ: ಸಿಟಿಡಿ ೨೨ ಎಂಎಲ್‌ಸಿ ಎಲೆಕ್ಷನ್ ಮಸ್ಟರಿಂಗ್…

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net