ಈಗಲೇ ಮತಪಟ್ಟಿಯಲ್ಲಿ ತಮ್ಮ ಹೆಸರು ಖಚಿತಪಡಿಸಿಕೊಳ್ಳಿ

 ಎಸ್‌ಐಆರ್ ಜಾಗೃತಿ ಅಂಗವಾಗಿ ಚಿತ್ರದುರ್ಗದಲ್ಲಿ ಆಯೋಜಿಸಿದ್ದ ಸ್ಥಳದಲ್ಲೇ ರಂಗೋಲಿ ಬಿಡಿಸುವ ಸ್ಪರ್ಧಾ ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಡಾ.ಎಸ್. ಆಕಾಶ್, ಸಿ.ಎಸ್. ಗಾಯತ್ರಿ, ಸುಮಾ, ವಿಜಯ್‌ಕುಮಾರ್, ವೈ. ರವಿಕುಮಾರ್, ವೀಣಾ, ಬಿ.ಸಿ. ನಾಗರಾಜ್, ರವೀಂದ್ರನಾಥ್ ಇತರರು ಇದ್ದರು.
ಎಸ್‌ಐಆರ್ ಜಾಗೃತಿ ಅಂಗವಾಗಿ ಚಿತ್ರದುರ್ಗದಲ್ಲಿ ಆಯೋಜಿಸಿದ್ದ ಸ್ಥಳದಲ್ಲೇ ರಂಗೋಲಿ ಬಿಡಿಸುವ ಸ್ಪರ್ಧಾ ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಡಾ.ಎಸ್. ಆಕಾಶ್, ಸಿ.ಎಸ್. ಗಾಯತ್ರಿ, ಸುಮಾ, ವಿಜಯ್‌ಕುಮಾರ್, ವೈ. ರವಿಕುಮಾರ್, ವೀಣಾ, ಬಿ.ಸಿ. ನಾಗರಾಜ್, ರವೀಂದ್ರನಾಥ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎಸ್‌ಐಆರ್ ಅಂಗವಾಗಿ ದುರ್ಗದಲ್ಲಿ ರಂಗೋಲಿ ಬಿಡಿಸುವ ಸ್ಪರ್ಧೆ
  • ಜಿಪಂ ಸಿಇಒ ಡಾ.ಎಸ್. ಆಕಾಶ್
  • ಜಿಲ್ಲಾ ಸ್ವೀಪ್ ಸಮಿತಿ
ಚಿತ್ರದುರ್ಗ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಬಿಎಲ್‌ಒಗಳು ಜು.೩೦ರವರೆಗೆ ಮನೆ, ಮನೆಗೆ ಭೇಟಿ ನೀಡುವ ಮೂಲಕ ಗಣತಿ ನಮೂನೆಗಳನ್ನು ವಿತರಿಸಲಿದ್ದಾರೆ ಎಂದು ಜಿಪಂ ಸಿಇಒ ಡಾ.ಎಸ್. ಆಕಾಶ್ ಹೇಳಿದರು.
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ-೨೦೨೬ರ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿ ಆವರಣದಲ್ಲಿ ಶುಕ್ರವಾರ ಎಸ್‌ಐಆರ್ ಜಾಗೃತಿಗೆ ಆಯೋಜಿಸಿದ್ದ ರಂಗೋಲಿ ಸ್ಪರ್ಧಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಒಂದು ವೇಳೆ ಇನ್ನು ಯಾರಾದರೂ ಗಣತಿ ನಮೂನೆ ಪಡೆದಿಲ್ಲವಾದರೆ ತಕ್ಷಣವೇ ನಿಮ್ಮ ಬಿಎಲ್‌ಒಗಳನ್ನು ಸಂಪರ್ಕಿಸಿ, ಗಣತಿ ನಮೂನೆ ಪಡೆದು ಅಗತ್ಯ ದಾಖಲೆಗಳ ಸಮೇತ ನಿಖರವಾಗಿ ಭರ್ತಿ ಮಾಡಿ, ಶೀಘ್ರ ಬಿಎಲ್‌ಒಗಳಿಗೆ ಹಿಂತಿರುಗಿಸಬೇಕು.
ಇದರಿಂದ ಮುಂಬರುವ ಚುನಾವಣೆಗಳ ಸಂದರ್ಭದಲ್ಲಿ ಮತದಾನ ದಿನದಂದು`ಮತದಾರರ ಪಟ್ಟಿಯಲ್ಲಿ ಹೆಸರಿಲ್ಲ'ಎಂಬ ಗೊಂದಲಕ್ಕೆ ಅವಕಾಶವಿರದು. ಅದಕ್ಕಾಗಿ ಈಗಲೇ ಜಾಗೃತರಾಗಿ ಗಣತಿ ನಮೂನೆಗಳನ್ನು ಭರ್ತಿ ಮಾಡಿ ಸಲ್ಲಿಸಿ ಮತದಾರರ ಪಟ್ಟಿಯಲ್ಲಿ ಹೆಸರಿರುವುದನ್ನು ಖಚಿತಪಡಿಸಿಕೊಳ್ಳಬೇಕೆಂದು ಸಿಇಒ ಮತದಾರರಿಗೆ ಮನವಿ ಮಾಡಿದರು.
ರಂಗೋಲಿಗಳನ್ನು ವೀಕ್ಷಿಸಿದ ಆಕಾಶ್, ಸ್ಪಽðಗಳು ಅತ್ಯಂತ ಆಕರ್ಷಕ ಮತ್ತು ಅರ್ಥಪೂರ್ಣವಾಗಿ ರಂಗೋಲಿಗಳನ್ನು ಬಿಡಿಸಿ ದ್ದಾ ರೆ. ಎಲ್ಲರ ಪ್ರಯತ್ನ ಮೆಚ್ಚುವಂತದ್ದು ಎಂದು ಶ್ಲಾಘಿಸಿದರು. ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಸ್ವ ಸಹಾಯ ಗುಂಪಿನ ಮಹಿಳೆಯರು, ಬೂತ್ ಮಟ್ಟದ ಅಽಕಾರಿಗಳು ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು. ಎಸ್‌ಐಆರ್ ಕುರಿತ ಜಾಗೃತಿ ಸಂದೇಶಗಳು ರಂಗೋಲಿ ಬಣ್ಣಗಳ ಮೂಲಕ ಮೂಡಿಬಂದವು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿ ಸಲಾಯಿತು.
ಜಿಪಂ ಸಿಪಿಒ ಸಿ.ಎಸ್. ಗಾಯತ್ರಿ, ಸಹಾಯಕ ಯೋಜನಾಽಕಾರಿ ಸುಮಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ವಿಜಯ್‌ಕುಮಾರ್, ತಾಪಂ ಇಒ ವೈ. ರವಿಕುಮಾರ್, ಚಿತ್ರದುರ್ಗ ಶಿಶು ಅಭಿವೃದ್ಧಿ ಯೋಜನಾಽಕಾರಿ ವೀಣಾ, ಜಿಲ್ಲಾ ವಾಶ್ ಐಇಸಿ ಸಮಾಲೋಚಕ ಬಿ.ಸಿ. ನಾಗರಾಜ್, ನರೇಗಾ ಐಇಸಿ ಸಮಾಲೋಚಕ ರವೀಂದ್ರನಾಥ್ ಮತ್ತಿತರರು ಇದ್ದರು.
ತುರುವನೂರು ಹೋಬಳಿಯಲ್ಲಿ ಎಸ್‌ಐಆರ್ ಪ್ರಗತಿ ಪರಿಶೀಲನೆ
ಚಳ್ಳಕರೆ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಽಕಾರಿ ರೇಷ್ಮಾ ಹಾನಗಲ್ ಅವರು ತುರುವನೂರು ಹೋಬಳಿ ವ್ಯಾಪ್ತಿಯ ವಿವಿಧೆಡೆ ಭೇಟಿ ನೀಡಿ ಶುಕ್ರವಾರ ಎಸ್‌ಐಆರ್ ಪ್ರಗತಿ ಪರಿಶೀಲನೆ ನಡೆಸಿದರು.
ನಿಗದಿತ ಅವಽಗಿಂತ ಮುಂಚಿತವಾಗಿ ಯಶಸ್ವಿಯಾಗಿ ಪೂರ್ಣಗೊಳಿಸಿದ ಬೆಳಗಟ್ಟದ ಬಿಎಲ್‌ಒ ಓಬಯ್ಯ ರವರ ಕಾರ್ಯಕ್ಷಮತೆ ಶ್ಲಾಘಿಸಿ ಸನ್ಮಾನಿಸಿದರು. ತುರುವನೂರು ಉಪ ತಹಸೀಲ್ದಾರ್ ಪ್ರಕಾಶ್, ಕಂದಾಯ ನಿರೀಕ್ಷಕ ನವೀನ್‌ಕುಮಾರ್, ಬಿಎಲ್‌ಒ ಮೇಲ್ವಿಚಾರಕ ಹೊಸಮನಿ ಚಂದ್ರಪ್ಪ ಇದ್ದರು.
೨.೬೮ ಲಕ್ಷಕ್ಕೂ ಅಽಕ ಮಂದಿಗೆ ನಮೂನೆ ವಿತರಣೆ: ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ನಿಮಿತ್ತ ಜುಲೈ ೧೦ ರವರೆಗೆ ೨,೬೮,೫೭೦ ನಮೂನೆಗಳನ್ನು ವಿತರಿಸಲಾಗಿದೆ. ಈ ಕ್ಷೇತ್ರದಲ್ಲಿ ಒಟ್ಟು ೨೮೮ ಮತಗಟ್ಟೆಗಳು ಹಾಗೂ ೨,೬೯,೩೩೨ ಮತದಾರರು ಇದ್ದಾರೆ. ಸದ್ಯ ವಿತರಿಸಿರುವ ಗಣತಿ ನಮೂನೆಗಳಲ್ಲಿ ೭೨,೩೦೩ ಗಣತಿ ನಮೂನೆಗಳನ್ನು ಈಗಾಗಲೇ ಗಣಕೀಕರಣ ಮಾಡಲಾಗಿದೆ.
ಚಿತ್ರದುರ್ಗ ಕ್ಷೇತ್ರದಲ್ಲಿ ಶಾಶ್ವತವಾಗಿ ವಲಸೆ ಹೋಗಿರುವ ೧೭೩ ಜನರನ್ನು ಪತ್ತೆ ಹಚ್ಚಲಾಗಿದೆ. ಉಳಿದಂತೆ ಮರಣ ಹೊಂದಿರುವ ೨೩೬ ಮತದಾರರು, ಡಬಲ್ ಎಂಟ್ರಿ ೫೩ ಪ್ರಕರಣಗಳು ಹಾಗೂ ಗೈರುಹಾಜರಾಗಿರುವ ೯ ಜನರನ್ನು ಗುರುತಿಸಿ ಪಟ್ಟಿಯಿಂದ ತೆಗೆದುಹಾಕುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಉಪವಿಭಾಗಾಽಕಾರಿ ಡಾ.ಕೆ.ಜೆ. ಕಾಂತರಾಜ್ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net